ನವದೆಹಲಿ, ಡಿ 07 (Daijiworld News/MB): ಉನ್ನಾವೋ ಅತ್ಯಾಚಾರಿ ಆರೋಪಿಗಳು ಅತ್ಯಾಚಾರ ಸಂತ್ರಸ್ಥೆ ವಿಚಾರಣೆಗೆ ತೆರಳುತ್ತಿದ್ದ ವೇಳೆ ಬೆಂಕಿ ಹಚ್ಚಿದ್ದು ಆಸ್ಪತ್ರೆಯಲ್ಲಿದ್ದ ಸಂತ್ರಸ್ಥೆ ಶುಕ್ರವಾರ ತಡ ರಾತ್ರಿ ಕೊನಯುಸಿರೆಳೆದಿದ್ದಾಳೆ. ಈ ನಡುವೆ ಹೈದರಾಬಾದ್ನಲ್ಲಿ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಸುಟ್ಟು ಹತ್ಯೆ ಮಾಡಿದ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ರೀತಿಯಲ್ಲೇ ಉನ್ನಾವೋ ಅತ್ಯಾಚಾರ ಆರೋಪಿಗಳನ್ನು ಎನ್ಕೌಂಟರ್ ಮಾಡಿ ಹಾಗೆಯೇ ಈವರೆಗೆ ಎಷ್ಟೋ ಅತ್ಯಾಚಾರ ಪ್ರಕರಣ ನಡೆದಿದ್ದು ನಿಜವಾದ ಆರೋಪಿಗಳನ್ನು ಬಂಧಿಸದೇ ಮಾನಸಿಕ ಅಸ್ವಸ್ತರನ್ನು ಆರೋಪಿಗಳೆನ್ನಲಾಗಿದೆ. ಆ ನಿಜವಾದ ಆರೋಪಿಗಳನ್ನು ಎನ್ಕೌಂಟರ್ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಗ್ರಹ ಮಾಡುತ್ತಿದ್ದಾರೆ.
ಉನ್ನಾವೋದಲ್ಲಿ 20 ವರ್ಷದ ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಲಾಗಿದ್ದು, ಆಕೆ ಸಾವು ಬದುಕಿನ ಮದ್ಯೆ ಹೋರಾಡಿ ಬದುಕುಳಿದಿದ್ದಳು. ಗುರುವಾರ ಈ ಪ್ರಕರಣದ ವಿಚಾರಣೆಗೆಂದು ನ್ಯಾಯಾಲಯಕ್ಕೆ ತೆರಳುತ್ತಿದ್ದ ವೇಳೆ ಅತ್ಯಾಚಾರ ಆರೋಪಿಗಳು ದಾರಿಯಲ್ಲಿ ಅಡ್ಡಗಟ್ಟಿ ಬೆಂಕಿ ಹಾಕಿ ಸುಟ್ಟಿದ್ದರು. ಸಂತ್ರಸ್ಥೆಯನ್ನು ದೆಹಲಿಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಅತ್ಯಾಚಾರ ಆರೋಪಿಗಳಾದ ಐವರಲ್ಲಿ ಮೂವರನ್ನು ಮಾತ್ರ ಪೊಲೀಸರು ಬಂಧಿಸಿದ್ದು ಇಬ್ಬರು ತಲೆ ಮರೆಸಿಕೊಂಡಿದ್ದರು. ಸಂತ್ರಸ್ಥೆಗೆ ಬೆಂಕಿ ಹಾಕುವ ವೇಳೆ ಐವರು ಇದ್ದರು ಎಂದು ಸಂತ್ರಸ್ಥೆ ಸಾವಿಗೂ ಮುನ್ನ ತಿಳಿಸಿದ್ದಾರೆ.
ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಹೋರಾಟ ನಡೆಸಿದರೂ ಬದುಕುಳಿಯಲಿಲ್ಲ. ಉತ್ತರಪ್ರದೇಶ ಪೊಲೀಸರು ಘಟನೆ ಕುರಿತು ಯಾವ ಕ್ರಮ ಕೈಗೊಳ್ಳುತ್ತಾರೆ? ಹೈದರಾಬಾದ್ ಪೊಲೀಸರಂತೆ ಎನ್ಕೌಂಟರ್ ಮಾಡುತ್ತಾರೆಯೇ? ಆರೋಪಿಗಳು ಈಗಾಗಲೇ ಜಾಮೀನಿನ ಮೇಲೆ ಹೊರಬಂದಿದ್ದಾರೆ. ನ್ಯಾಯ ಹೇಗೆ ಮೆಲುಗೈ ಸಾಧಿಸುತ್ತದೆ ಎಂದು ಕಾದು ನೋಡೋಣ ಎಂದು ಹಲವರು ಟ್ವೀಟ್ ಮಾಡಿದ್ದಾರೆ.
ಹಾಗೆಯೇ ಟ್ಟಿಟ್ಟರ್ ನಲ್ಲಿ #unnaorape, #UnnaoTruth ಎಂಬ ಹ್ಯಾಷ್ ಟ್ಯಾಗ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.