ಬೆಂಗಳೂರು, ಡಿ 07 (Daijiworld News/MB) : ತಮ್ಮ ವಿವಾದಾತ್ಮಾಕ ಹೇಳಿಕೆಗಳಿಂದಲ್ಲೇ ಸುದ್ದಿಯಾಗುತ್ತಿರುವ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಉಪ ಮುಖ್ಯಮಂತ್ರಿಯ ಹುದ್ದೆಯನ್ನು ಬಾಲಿವುಡ್ ನಟಿ ಐಶ್ವರ್ಯ ರೈಗೆ ಹೋಲಿಕೆ ಮಾಡಿದ್ದಾರೆ. ಉಪ ಚುನಾವಣೆಯ ಬಳಿಕ ಮತ್ತೋರ್ವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗುವುದೇ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಈ ಉತ್ತರವನ್ನು ನೀಡಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತಾನಾಡಿದ ಅವರು, "ಉಪ ಮುಖ್ಯಮಂತ್ರಿ ಹುದ್ದೆಯನ್ನು ಎಲ್ಲರೂ ಬಯಸುತ್ತಾರೆ. ಆದರೆ ಎಲ್ಲಾರಿಗೂ ಉಪ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಎಲ್ಲರ ಬಯಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ" ಎಂದು ಹೇಳುತ್ತಾ "ಉಪ ಮುಖ್ಯಮಂತ್ರಿ ಹುದ್ದೆ ಐಶ್ವರ್ಯಾ ರೈ ಇದ್ದಂತೆ" ಎಂದು ಹೇಳಿ ಮುಜುಗರಕ್ಕೀಡಾಗಿದ್ದಾರೆ.
"ಎಲ್ಲಾ ರಾಜಕಾರಣಿಗಳು ಉಪ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಅವರ ಈ ಬಯಕೆ ವಿವಾಹವಾಗುವ ವಯಸ್ಸಿಗೆ ಬಂದ ಯುವಕರು ಐಶ್ವರ್ಯಾ ರೈಯನ್ನು ವಿವಾಹವಾಗಲು ಬಯಸಿದ್ದಂತೆ. ಇರುವುದು ಕೇವಲ ಒಂದೇ ಐಶ್ವರ್ಯಾ ರೈ" ಎಂದು ಹೇಳಿದ್ದಾರೆ.
ಮಾಧ್ಯಮದವರು ಗೋಕಾಕ್ನ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆಯ ಕುರಿತು ಪ್ರಶ್ನೆ ಕೇಳಿದ್ದರು.