ನವದೆಹಲಿ, ಡಿ 07 (Daijiworld News/MB) : ಸ್ವಯಂ ಘೋಷಿತ ದೇವ ಮಾನವನ ವಿರುದ್ಧ ಹಲವು ವಿಚಾರಗಳಲ್ಲಿ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಪರಾರಿಯಾಗಿರುವ ನಿತ್ಯಾನಂದ ಈಗ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ಅದೀಗ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ನಿತ್ಯಾನಂದ ಅವರು "ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ. ನಾನು ಪರಮಶಿವ" ಎಂದು ಹೇಳಿದ್ದಾರೆ.
"ಈಡೀ ವಿಶ್ವವೇ ನನ್ನನ್ನು ವಿರೋಧಿಸುತ್ತಿದೆ. ಆದರೆ ನೀವು ನನ್ನಲ್ಲಿ ಬಂದು ನನ್ನ ಮೇಲೆ ನಿಮಗೆ ಇರುವ ನಿಷ್ಠಯನ್ನು ಪ್ರದರ್ಶನ ಮಾಡಿದ್ದೀರಿ.ನಾನು ನಿಮ್ಮ ಮುಂದೆ ನನ್ನ ಸಂತ್ಯಾಂಶವನ್ನು ಹೇಳುವುದರ ಮುಖೇನ ನಾನು ನಿಮ್ಮ ಮೇಲೆ ತೋರಿಸುವ ನಿಷ್ಠೆಯನ್ನು ಪ್ರದರ್ಶಿಸುತ್ತೇನೆ. ಈಗ ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ನಾನು ನಿಮಗೆ ಸತ್ಯ ಹೇಳುತ್ತೇನೆ. ನಾನು ಪರಮ ಶಿವ. ಅರ್ಥವಾಯಿತೇ" ಎಂದು ಕೇಳಿದ್ದಾರೆ.
"ಯಾವ ನ್ಯಾಯಾಲಯವೂ ನನ್ನನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ. ಅಷ್ಟು ಮಾತ್ರವಲ್ಲದೇ ಸತ್ಯಾಂಶ ಏನು ಎಂಬುವುದನ್ನು ನಾನು ಜಗತ್ತಿಗೆ ತೋರಿಸುತ್ತೇನೆ. ಈ ಮೂಲಕ ನನ್ನ ಅಂತರತ್ವವನ್ನು ನಾನು ತೋರಿಸುತ್ತೇನೆ. ಈಗ ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ"ಎಂದು ಹೇಳಿದ್ದಾರೆ.
ಈ ಮೊದಲು ನಿತ್ಯಾನಂದ ಈಕ್ವೇಡಾರ್ ದ್ವೀಪವನ್ನು ಖರೀದಿ ಮಾಡಿ ಕೈಲಾಸ ಎಂಬ ಹಿಂದೂ ರಾಷ್ಟ್ರವನ್ನು ನಿರ್ಮಿಸುವ ಸಿದ್ಧತೆ ಮಾಡಿದ್ದಾನೆ ಎಂದು ವೆಬ್ಸೈಟ್ ಮುಖೇನ ತಿಳಿಸಿದ್ದ. ಆದರೆ ಇದನ್ನು ಅಲ್ಲಗಳೆದಿರುವ ಈಕ್ವೇಡಾರ್ ಸರಕಾರ ನಾವು ಯಾವುದೇ ದ್ವೀಪವನ್ನು ಮಾರಾಟ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ನಿತ್ಯಾನಂದ ಅವರ ವೀಸಾ ಅವಧಿಯು ಮುಕ್ತಾಯವಾಗಿದ್ದು ನವೀಕರಿಸುವ ಅರ್ಜಿಯನ್ನು ತಿರಸ್ಕಾರ ಮಾಡಲಾಗಿದೆ.