ಮಧ್ಯಪ್ರದೇಶ, ಡಿ 08 (Daijiworld News/MB) : ಶಾಲಾ ಶಿಕ್ಷಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಗುರುವಾರ ಸಂಜೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ಸಂಜೆ ಶಿಕ್ಷಕಿ ಶಾಲೆ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಅಪಹರಣ ಮಾಡಿದ ದುಷ್ಕರ್ಮಿಗಳು ಆಕೆಯ ಮೇಲೆ ಸಮಾಹಿಕ ಅತ್ಯಾಚಾರ ನಡೆಸಿದ್ದು ಸಾಮೂಹಿಕ ಅತ್ಯಾಚಾರದಿಂದಾಗಿ ಶಿಕ್ಷಕಿಯ ಜ್ಞಾನ ತಪ್ಪಿದ್ದುಆಕೆಗೆ ಎಚ್ಚರವಾಗುವ ಮೊದಲು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಕೆಲ ಸಮಯದ ನಂತರ ಎಚ್ಚರಗೊಂಡ ಶಿಕ್ಷಕಿ ಮನೆಗೆ ತೆರಳಿ ವಿಷಯವನ್ನು ಕುಟುಂಬಸ್ಥರ ಬಳಿ ತಿಳಿಸಿದ್ದಾಳೆ. ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಕಾರ್ಯನಿರತರಾದ ಪೊಲೀಸರು ಆರೋಪಿಗಳಾದ ಬಚ್ಚು ಲೋನಿಯಾ, ಬೀರು ಲೋನಿಯಾ, ನರೇಂದ್ರ ಲೋನಿಯಾ ಮತ್ತು ಶಿವ್ ಶಂಕರ್ ಲೋನಿಯಾನನ್ನು ಬಂಧಿಸಿದ್ದಾರೆ.
ಬಂಧನವಾದ ಆರೋಪಿಗಳು ಈ ಹಿಂದೆಯೂ ಕೂಡಾ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ರಾಂಪುರ್ ನೈಕಿನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.