ಬೆಂಗಳೂರು, ಡಿ 08 (Daijiworld News/MB) : ಭಾರತವನ್ನು ವಿಶ್ವದ ಅತ್ಯಾಚಾರಗಳ ರಾಜಧಾನಿ ಎಂದು ಹೇಳಿದ ರಾಹುಲ್ ಗಾಂಧಿ ವಿರುದ್ಧ ಸಿಡಿದೆದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ "ರಾಹುಲ್ ಗಾಂಧಿಯವರ ಈ ಹೇಳಿಕೆ ಖಡನಾರ್ಹ. ಈ ಹೇಳಿಕೆಯಿಂದ ನಮ್ಮ ದೇಶದ ಗೌರವ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮಣ್ಣುಪಾಲು ಆಗುತ್ತದೆ" ಎಂದು ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡುರುವ ಅವರು, "ಕಾಂಗ್ರೆಸ್ ನಂತಹ ಹಿರಿಯ ಪಕ್ಷದ ಮುಖಂಡರಾಗಿರುವ ರಾಹುಲ್ ಗಾಂಧಿಯವರು ಈ ರೀತಿ ಬೇಜಾವ್ದಾರಿಯ ಹೇಳಿಕೆ ನೀಡಬಾರದು. ತಮ್ಮ ಜವಾಬ್ದಾರಿಯನ್ನು ತಿಳಿದು ಮಾತಾನಾಡಬೇಕು. ಈ ರೀತಿ ಮಾತಾನಾಡಿದರೆ ನಮ್ಮ ದೇಶದ ಗೌರಕ್ಕೆ ಧಕ್ಕೆ ಉಂಟಾಗುತ್ತದೆ ಎಂಬ ತಿಳುವಳಿಕೆಯು ಇವರಿಗೆ ಇಲ್ಲ ಎಂಬುದು ದುರ್ದೈವ" ಎಂದು ತಿಳಿಸಿದ್ದಾರೆ.
"ಎಲ್ಲಾ ಪಕ್ಷಗಳು ಸಂಘಟಿತವಾಗಿ ಅತ್ಯಾಚಾರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯದಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ನಡೆದುವ ಅಗತ್ಯವಿದೆ. ಹೋರಾಟ ನಡೆಸುವ ಬದಲು ಈ ರೀತಿ ರಾಜಕೀಯ ಪ್ರೇರಿತ ಹೇಳಿಕೆ ನೀಡಿದರೆ ಸಮಸ್ಯೆ ಪರಿಹಾವಾಗುವುದಿಲ್ಲ ಬದಲಾಗಿ ಸಮಸ್ಯೆ ಮತ್ತಷ್ಟು ಹೇಚ್ಚಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
"ರಾಹುಲ್ ಗಾಂಧಿಯವರು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಿಂಸಾಚಾರದಲ್ಲಿ ನಂಬಿಕೆ ಹೊಂದಿದ್ದಾರೆ ಎಂಬ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಅದನ್ನು ಖಂಡಿಸುತ್ತೇನೆ. ಹಿಂದೆ ಸಿಕ್ ಜನಾಂಗದ ಮೇಲೆ ದೆಹಲಿಯಲ್ಲಿ ಅಮಾನವೀಯವಾಗಿ ಹಿಂಸೆ ಮಾಡಿದ್ದು ಯಾರು ಎಂದು ರಾಹುಲ್ ಗಾಂಧಿಯವರು ನೆನಪಿಸಿಕೊಳ್ಳಬೇಕು. ಆಗ ಅವರಿಗೆ ನಿಜವಾಗಿ ಹಿಂಸಾವಾದಿಗಳು ಯಾರು ಎಂದು ತಿಳಿಯುತ್ತದೆ" ಎಂದು ಪ್ರತಿಕ್ರಿಯೆ ನೀಡಿದರು.