ನವದೆಹಲಿ, ಡಿ 08 (Daijiworld News/MB) : "2020ರ ವೇಳೆಗೆ ವೈಯಕ್ತಿಕ ತೆರಿಗೆ ದರದಲ್ಲಿ ಕಡಿತವನ್ನು ಘೋಷಿಸುವ ಸಾಧ್ಯತೆಯಿದೆ" ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
17ನೇ ಹಿಂದೂಸ್ತಾನ್ ಟೈಮ್ಸ್ ಲೀಡರ್ ಶಿಪ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ದೇಶದ ಆರ್ಥಿಕತೆಯ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು 2020ರ ವೇಳೆಗೆ ವೈಯಕ್ತಿಕ ತೆರಿಗೆ ದರದಲ್ಲಿ ಕಡಿತವನ್ನು ಘೋಷಿಸುವ ಸಾಧ್ಯತೆಯಿದ್ದು ಅದಕ್ಕಾಗಿ ಬಜೆಟ್ಗಾಗಿ ಕಾಯಬೇಕಾಗುತ್ತದೆ" ಎಂದು ಹೇಳಿದ್ದಾರೆ. ಆದರೆ 2021ರ ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದೆ.
"ತೆರಿಗೆ ಅವಧಿಯನ್ನು ಸರಳೀಕರಣಗೊಳಿಸಿ ಶೋಷಣೆರಹಿತವಾದ ತೆರಿಗೆ ಕ್ರಮ ತರುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲಿದೆ" ಎಂದು ಹೇಳಿದ್ದಾರೆ.
ಹಾಗೆಯೇ ದೇಶದ ಆರ್ಥಿಕ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್ ಅವರು, " ಕೆಲವಲಯಗಳಲ್ಲಿ ಮಾತ್ರ ಆರ್ಥಿಕ ಬಿಕ್ಕಟ್ಟಿದೆ. ಇನ್ನು ಕೆಲವು ವಲಯಗಳಲ್ಲಿ ಈಗಾಗಲೇ ಸುಧಾರಣೆಯಾಗುತ್ತಿದೆ. ಇನ್ನೂ ಕೆಲವು ವಲಯಗಳಿವೆ ನೆರವು ಮಾಡಬೇಕಾಗಿದೆ" ಎಂದು ತಿಳಿಸಿದ್ದಾರೆ.
ಜುಲೈ- ಸೆಪ್ಟೆಂಬರ್ ನಲ್ಲಿ ದೇಶದ ಆರ್ಥಿಕ ಪ್ರಗತಿ ಶೇ. 4.5ಕ್ಕೆ ಇಳಿದಿದೆ. ಕಳೆದ ಆರು ವರ್ಷಗಳಲ್ಲಿ ಇದು ಅತಿ ಕಡಿಮೆ ಜಿಡಿಪಿಯಾಗಿದೆ.