ನವದೆಹಲಿ, ಡಿ 12 (DaijiworldNews/SM): ಉತ್ತರ ದೆಹಲಿಯ ಅನಜ್ ಮಂಡಿ ಪ್ರದೇಶದ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ 43 ಮಂದಿ ಸಜೀವ ದಹನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ಮಾಲೀಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದೆಹಲಿ ಪೊಲೀಸರು ಅನಜ್ ಮಂಡಿ ಕಟ್ಟಡದ ಮಾಲೀಕ ರೆಹಾನ್ ಮತ್ತು ಆತನ ಮ್ಯಾನೇಜರ್ ಫುರ್ಕಾನ್ ಎಂಬಾತನನ್ನು ಬಂಧಿಸಿದ್ದಾರೆ. ಹಾಗೂ ಐಪಿಸಿ ಸೆಕ್ಷನ್ 304 ಮತ್ತು 285 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.