ಬೆಂಗಳೂರು, ಡಿ 09 (Daijiworld News/MB) : ಇಂದು ಬಿಜೆಪಿ ಸರಕಾರದ ಭವಿಷ್ಯ ನಿರ್ಧಾರವಾಗಲಿದ್ದು ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ.
ಹಿರೇಕೆರೂರು, ಯಶವಂತಪುರ, ಅಥಣಿ, ಕೆ.ಆರ್.ಪೇಟೆ, ಚಿಕ್ಕಬಳ್ಳಾಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಕಾಗವಾಡ, ಗೋಕಾಕ್, ರಾಣೆಬೆನ್ನೂರು, ಯಲ್ಲಾಪುರ, ವಿಜಯನಗರ, ಕೆ.ಆರ್.ಪುರ, ಹೊಸಕೋಟೆ, ಮತ್ತು ಹುಣಸೂರು ಕ್ಷೇತ್ರದಲ್ಲಿ ಗುರುವಾರ ಉಪಚುನಾವಣೆ ನಡೆದಿದೆ.
ಅನರ್ಹ ಶಾಸಕರಿಂದ ತೆರವುಗೊಂಡಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಈ ಪೈಕಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಾಗಿ 13 ಅನರ್ಹ ಶಾಸಕರು ಚುನಾವಣೆ ಕಣಕ್ಕೆ ಇಳಿದಿದ್ದರು. ಇಂದು ಮತ ಎಣಿಕೆಯ ನಂತರ ಈ ಅನರ್ಹ ಶಾಸಕರ ಭವಿಷ್ಯವು ಕೂಡಾ ನಿರ್ಧಾರವಾಗಲಿದೆ.
ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡು, ನಂತರ 12 ಗಂಟೆ ವೇಳೆಗೆ ಅಧಿಕೃತ ಫಲಿತಾಂಶ ಹೊರಬೀಳಲಿದೆ.