ಬೆಂಗಳೂರು, ಡಿ 09(Daijiworld News/MSP): ರಾಜ್ಯದಲ್ಲಿ 5 ತಿಂಗಳ ಹಿಂದೆ ನಡೆದ ರಾಜಕೀಯ ಪ್ರಹಸನದ ಆ ಬಳಿಕ ರಚನೆಯಾದ ಬಿಜೆಪಿ ಸರ್ಕಾರದ ಅಳಿವು- ಉಳಿವು ನಿರ್ಧರವಾಗಲಿರುವ ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತಎಣಿಕೆ ಸೋಮವಾರ ಬೆಳಗ್ಗೆ 8ಗಂಟೆಗೆ ಆರಂಭವಾಗಿದೆ. ಯಾವ ಯಾವ ಕ್ಷೇತ್ರದಲ್ಲಿ ಯಾರ್ಯಾರಿಗೆ ಗೆಲುವು - ಸೋಲು ಎಂಬುವುದು ಮಧ್ಯಾಹ್ನದೊಳಗೆ ಸ್ಪಷ್ಟವಾಗಲಿದೆ.
ಮತಎಣಿಕೆ ನಡೆಯುವ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮೂರು ಸುತ್ತಿನ ಮತಎಣಿಕೆ ಮುಕ್ತಾಯವಾಗಿದ್ದು ಮತದಾರ ಬಿಜೆಪಿಯತ್ತ ಓಲವು ತೋರಿದ್ದಾನೆ.
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜವರಾಯಗೌಡಗೆ ಮುನ್ನಡೆ ಸಾಧಿಸಿದ್ರೆ, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡಗೆ ಮತ್ತೆ ಮುನ್ನಡೆ ಸಾಧಿಸಿದ್ದಾರೆ. ಅಥಣಿ ಬಿಜೆಪಿ ಅಬ್ಯರ್ಥಿ ಮಹೇಶ್ ಕುಮುಟಹಳ್ಳಿ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಸುಧಾಕರ್ ಗೆ, ಯಲ್ಲಾಪುರ ಬಿಜೆಪಿಯ ಶಿವರಾಮ್ ಹೆಬ್ಬಾರ್, ರಾಣೆಬೆನ್ನೂರು ಅರುಣ್ ಕುಮಾರ್ , ವಿಜಯನಗರ ಅನಂದ್ ಸಿಂಗ್, ಕೆ. ಆರ್ ಪುರಂನಲ್ಲಿ ಬೈರತಿ ಬಸವರಾಜು, ಹಿರೇಕೆರೂರದಲ್ಲಿ ಬಿಜೆಪಿಯ ಬಿ.ಸಿ ಪಾಟೀಲ್ ಮುನ್ನಡೆ ಸಾಧಿಸಿದ್ದಾರೆ.
ಶಿವಾಜಿ ನಗರ ಕ್ಷೇತ್ರದಲ್ಲಿ ರಿಜ್ವಾನ್ ಅರ್ಷದ್ ಮುನ್ನಡೆ ಸಾಧಿಸಿದ್ದಾರೆ. ಅಥಣಿ ಮತ ಕ್ಷೇತ್ರದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ತಾತ್ಕಲಿಕವಾಗಿ ಮತ ಎಣಿಕೆ ಸ್ಥಗಿತವಾಗಿದೆ.