ಗುಜರಾತ್, ಡಿ 09 (Daijiworld News/MB) : ಇಲ್ಲಿನ ಭುಥಿಯಾ ಗ್ರಾಮದಲ್ಲಿ12 ವರ್ಷದ ಬಾಲಕಿ ಮೇಲೆ ಒಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ ಮೂವರು ದುಷ್ಕರ್ಮಿಗಳನ್ನು ಭಾವ್ ನಗರ್ ಪೊಲೀಸರು ಬಂಧಿಸಿದ್ದಾರೆ. ಆದರೆ ತನಿಖೆಯ ವೇಳೆ ಈ ಮೂವರನ್ನು ತಾಯಿಯೇ ಮಗಳನ್ನು ಅತ್ಯಾಚಾರ ಮಾಡುವಂತೆ ಮನೆಗೆ ಕರೆದುಕೊಂಡು ಬರುತ್ತಿದ್ದಳು ಎಂದು ವರದಿಯೊಂದರಿಂದ ತಿಳಿದು ಬಂದಿದೆ.
ಬಾಬು ಭಾಯ್ ಸರ್ತಾನ್ ಪರ (43), ಶಾಂತಿ ದಾಂದುಕಿಯಾ(46) ಹಾಗೂ ಚಂದ್ರೇಶ್ ಸರ್ತಾನ್ ಪರ ಬಂಧಿತ ಆರೋಪಿಗಳಾಗಿದ್ದು, ಸಂತ್ರಸ್ಥೆಯ ತಾಯಿ ಪರಾರಿಯಾಗಿದ್ದಾರೆ.
ಈ ಕುರಿತು ಬಾಲಕಿಯ ತಂದೆ ಪ್ರಕರಣ ದಾಖಲು ಮಾಡಿದ್ದು, "ಈ ಮೂವರು ಕಳೆದ ಒಂದು ವರ್ಷದಿಂದ ನಿರಂತರವಾಗಿ ನನ್ನ ಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದು ಪತ್ನಿಯೂ ಇದರಲ್ಲಿ ಭಾಗಿಯಾಗಿದ್ದಾಳೆ" ಎಂದು ದೂರಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಂತ್ರಸ್ಥೆ, "ತಂದೆ ಹೊರಹೋಗುವ ಸಮಯದಲ್ಲಿ ಈ ಮೂವರು ಮನೆಗೆ ಬಂದು ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ತಾಯಿಯು ಕೂಡಾ ಮನೆಯಲ್ಲೇ ಇರುತ್ತಿದ್ದರು" ಎಂದು ತಿಳಿಸಿದ್ದಾಳೆ.