ನವದೆಹಲಿ, ಡಿ 10 (Daijiworld News/MB) : ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು ಮಸೂದೆ ಮಂಡನೆಯಾದ ಬಳಿಕ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರು ಮಸೂದೆಯನ್ನು ಹರಿದು ಹಾಕಿ ವಿರೋಧ ವ್ಯಕ್ತಪಡಿಸಿದ್ದಾರೆ.
ಆ ಮಸೂದೆಯ ಕುರಿತು ವಿರೋಧ ವ್ಯಕ್ತಪಡಿಸಿದ ಓವೈಸಿ ಅವರು, "ಇದರಿಂದಾಗಿ ಮತ್ತೊಂದು ವಿಭಜನೆಯಾಗುತ್ತಿದೆ. ಈ ಮಸೂದೆ ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದ್ದು, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧವಾಗಿದೆ. ಹಾಗಾಗಿ ದೇಶವನ್ನು ವಿಭಜನೆ ಮಾಡುವ ಈ ಮಸೂದೆಯನ್ನು ನಾನು ಹರಿದು ಹಾಕುತ್ತೇನೆ" ಎಂದು ಹೇಳಿದ್ದಾರೆ.
ಇದೇ ವೇಳೆ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ತೃಣಮೂಲ ಕಾಂಗ್ರೆಸ್ ನ ಅಭಿಷೇಕ್ ಬ್ಯಾನರ್ಜಿ, "ಸ್ವಾಮಿ ವಿವೇಕಾನಂದರು ಈ ಸಂದರ್ಭದಲ್ಲಿ ಇದ್ದಿದ್ದರೆ ಅವರ ಭಾರತದ ಕಲ್ಪನೆಗೆ ವಿರುದ್ಧವಾಗಿರುವ ಮಸೂದೆಯನ್ನು ಕಂಡು ಆಘಾತ ಪಡುತ್ತಿದ್ದರು. ಮಹಾತ್ಮಾ ಗಾಂಧಿ ಅವರ ಹೇಳಿಕೆಗಳನ್ನು ನಿರ್ಲಕ್ಷ್ಯ ಮಾಡಿದರೆ ನಮಗೆಯೇ ಹಾನಿಕಾರಕ" ಎಂದು ಹೇಳಿದ್ದಾರೆ.