ಮಹಾರಾಷ್ಟ್ರ, ಡಿ 10 (Daijiworld News/MB) : ತಂದೆಯೇ ಮಗಳನ್ನು ಹತ್ಯೆ ಮಾಡಿ ಚೀಲದಲ್ಲಿ ತುಂಬಿಸಿ ದೇಹದ ಅರ್ಧ ಭಾಗವನ್ನು ಆಟೋದಲ್ಲಿ ಇರಿಸಿ ಹೋದ ಘಟನೆ ಥಾಣೆಯ ಕಲ್ಯಾಣದಲ್ಲಿ ನಡೆದಿದ್ದು ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಟಿಟ್ವಾಲಾ ನಿವಾಸಿ ಅರವಿಂದ್ ತಿವಾರಿ (47) ಹಾಗೂ ಮೃತ ಯುವತಿ ಪ್ರಿನ್ಸಿ (22) ಎಂದು ತಿಳಿದುಬಂದಿದೆ.
ಬೇರೆ ಸಮುದಾಯಕ್ಕೆ ಸೇರಿದ ಸಹೊದ್ಯೋಗಿಯನ್ನು ಆಕೆ ವಿವಾಹವಾಗುವ ತಿರ್ಮಾನ ಮಾಡಿದ್ದಳು ಎಂಬ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಿ ದೇಹದ ಭಾಗವನ್ನು ಆಟೋದಲ್ಲಿ ಬಿಟ್ಟಿರುವುದಾಗಿ ಆರೋಪಿ ತಂದೆ ಹೇಳಿಕೊಂಡಿದ್ದು ಆತನ ಹೇಳಿಕೆಯನ್ನು ಬದಲಾಯಿಸುತ್ತಾ ಇದ್ದಾನೆ. ಹಾಗಾಗಿ ಪೊಲೀಸರು ಎಲ್ಲಾ ಹೇಳಿಕೆಗಳಿಗೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮುಂಜಾನೆ ಸುಮಾರು 5.25ರ ಸುಮಾರಿಗೆ ಅರವಿಂದ್ ತಿವಾರಿ ಅವರು ರೇಲ್ವೇ ನಿಲ್ದಾಣಕ್ಕೆಂದು ಹೇಳಿ ಆಟೋ ಹತ್ತಿದ್ದು ಆಟೋ ಚಾಲಕನಿಗೆ ದುರ್ವಾಸನೆ ಬಂದು ಅರವಿಂದ್ ತಿವಾರಿ ಅವರಲ್ಲಿ ಪ್ರಶ್ನಿಸಿದ್ದಾನೆ. ಆ ಸಂದರ್ಭದಲ್ಲಿ ಆ ಸೂಟ್ಕೇಸ್ನ್ನು ಆಟೋದಲ್ಲೇ ಬಿಟ್ಟು ತಿವಾರಿ ಓಡಿ ಹೋಗಿದ್ದು ಆಟೋ ಚಾಲಕ ಸೂಟ್ಕೇಸ್ ಪರಿಶೀಲಣೆ ಮಾಡಿದಾಗ ದೇಹದ ಮೇಲ್ಭಾಗವು ಕಂಡು ಬಂದಿದೆ. ಆಟೋ ಚಾಲಕ ಆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸಿಸಿ ಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದು ಆ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಸೂಟ್ಕೇಸ್ ಹಿಡಿದುಕೊಂಡು ರೈಲ್ವೇ ನಿಲ್ದಾಣದಲ್ಲಿ ನಿಂತಿರುವುದು ಕಂಡು ಬಂದಿದೆ. ಆ ಇಬ್ಬರ ಮೇಲು ನಿಗಾ ವಹಿಸಿದ ಪೊಲೀಸರು ಆರೋಪಿಯನ್ನು ಹಿಡಿದಿದ್ದಾರೆ.
ಈ ಕುರಿತು ಮಾತಾನಾಡಿದ ಅಪರಾಧ ವಿಭಾಗದ ಆಯುಕ್ತ ದೀಪಕ್ ದಿಯೋರಾಜ್, "ನಾವು ಅನುಮಾನಾಸ್ಪದ ಇಬ್ಬರು ಆರೋಪಿಗಳನ್ನು ಸಿಸಿ ಟಿವಿ ದೃಶ್ಯವಳಿಯಲ್ಲಿ ನೋಡಿ ಅದರ ತುಣುಕನ್ನು ನಮ್ಮ ಮಾಹಿತಿದಾರರಿಗೆ ನೀಡಿದ್ದೆವು. ಸೋಮವಾರ ಮಧ್ಯಾಹ್ನದ ವೇಳೆ ನಮ್ಮ ಪೊಲೀಸ್ ಸಿಬ್ಬಂದಿ ಸಂಜಯ್ ಬಾಬರ್ ಅವರ ತಂಡ ಅರವಿಂದ ತಿವಾರಿ ಅವರನ್ನು ಅವರು ಕೆಲಸ ಮಾಡುವ ಸ್ಥಳದಲ್ಲಿ ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ದೇಹವನ್ನು 2 ಭಾಗಗಲ್ಲನ್ನಾಗಿ ಮಾಡಿ 2 ಬ್ಯಾಗ್ಗಳಲ್ಲಿ ಒಯ್ಯುತ್ತಿದ್ದರು. ದೇಹದ ಇನ್ನೊಂದು ಭಾಗ ಟಿಟ್ವಾಲ ಕಲ್ಯಾಣ ನಡುವಿನ ಹಳಿಯಲ್ಲಿ ದೊರೆತಿದೆ. ಇನ್ನೋರ್ವ ಆರೋಪಿಯ ಶೋಧ ಕಾರ್ಯಚರಣೆ ನಡೆಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.