ನವದೆಹಲಿ, ಡಿ 11 (Daijiworld News/MB) : ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಹೋರಾಟ ಆರಂಭವಾಗಿದೆ. ಈ ಮಸೂದೆಯ ವಿಚಾರದಲ್ಲಿ ಕೆಲವು ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಗಳಿವೆ.
ಈ ಮಸೂದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಹೋಗುವುದಾಗಿ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ಎಎಎಸ್ಯು) ಹೇಳಿದೆ. ಈ ಸಂಘಟನೆಯ ಮುಖ್ಯ ಸಲಹೆಗಾರನಾಗಿರುವ ಸಮುಜ್ಜಲ್ ಭಟ್ಟಾಚಾರ್ಯ ಮೋದಿ ಸರಕಾರದ ಈ ತೀರ್ಮಾನವನ್ನು ವಿರೋಧಿಸಿ ಈ ಮಸೂದೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತಾನಾಡಿರುವ ಭಟ್ಟಾಚಾರ್ಯ "ನಮ್ಮ ಹಕ್ಕುಗಳನ್ನು ಈ ತಿದ್ದುಪಡಿ ಮಸೂದೆ ಕಸಿಯುತ್ತದೆ. ಈಶಾನ್ಯ ಪ್ರದೇಶಗಳ ಧ್ರುವೀಕರಣಕ್ಕೆ ವಿಭಜನಕಾರಿ ಬಿಜೆಪಿ ಮುಂದಾಗಿದೆ. ಈ ಸಿಎಬಿ ವಿರುದ್ಧ ನಾವು ಕಾನೂನಿನ ಮೆಟ್ಟಿಲೇರುತ್ತೇವೆ" ಎಂದು ಹೇಳಿದ್ದಾರೆ.