ಚಿಕ್ಕಮಗಳೂರು, ಡಿ 11 (Daijiworld News/MB) : "ದತ್ತಪೀಠ ವಿವಾದವನ್ನು ಈ ಬಾರಿ ಇತ್ಯರ್ಥ ಮಾಡುವ ಸಂಕಲ್ಪ ಮಾಡಿದ್ದು ಅಯೋಧ್ಯೆ ಮಾದರಿಯಲ್ಲೇ ದತ್ತಪೀಠ ವಿವಾದ ಇತ್ಯರ್ಥವಾಗುವ ವಿಶ್ವಾಸವಿದೆ" ಎಂದು ಸಚಿವ ಸಿ.ಟಿ ರವಿ ಹೇಳಿದ್ದಾರೆ.
"ದತ್ತ ಮಾಲಾಧಾರಿಯಾಗಿ ಮಾತನಾಡಿದ ಸಚಿವರು, "ನನಗೆ ದತ್ತಪೀಠ ವಿವಾದವನ್ನು ಇತ್ಯರ್ಥ ಮಾಡುವ ವಿಶ್ವಾಸವಿದೆ. ಇದೊಂದು ನ್ಯಾಯಯುತ ಹೋರಾಟವಾಗಿದೆ. ಜೆಡಿಎಸ್-ಕಾಂಗ್ರೆಸ್ ಕೂಡಾ ದತ್ತಪೀಠ ವಿವಾದ ಇತ್ಯರ್ಥಕ್ಕೆ ಸಹಮತ ಸೂಚಿಸಲಿ. ಈಗಾಗಲೇ ಹಿಂದೂ ಅರ್ಚಕರ ನೇಮಕ ಮಾಡಲು ಜೆಡಿಎಸ್ ಸಹಮತ ವ್ಯಕ್ತಪಡಿಸಿದೆ" ಎಂದು ಸಿ ಟಿ ರವಿ ತಿಳಿಸಿದ್ದಾರೆ.
"ದತ್ತಪೀಠದಲ್ಲಿ ನಡೆಯುವ ಪೂಜೆಗಳು ಹಿಂದೂ ಪದ್ಧತಿಗಳ ಪ್ರಕಾರ ನಡೆಯಬೇಕು. ಈ ವಿವಾದ ರಾಜಕೀಯ ಕೇಂದ್ರೀಕೃತವಾಗಿಲ್ಲ. ನಮಗೆ ದಲಿತ ಅರ್ಚಕರನ್ನು ನೇಮಕ ಮಾಡಿದರು ಪರವಾಗಿಲ್ಲ. ಒಟ್ಟಿನಲ್ಲಿ ಹಿಂದೂ ಅರ್ಚಕರು ನೇಮಕ ಮಾಡಬೇಕು" ಎಂದು ಆಗ್ರಹಿಸಿದ್ದಾರೆ.