ಪಾಲಾಕಾಡ್, ಡಿ 11 (Daijiworld News/MB) : ಶಿಕ್ಷಕಿಯೊಬ್ಬರ ಅಜಾಗರುಕತೆಯಿಂದ ತರಗತಿಗೆಯನ್ನು ಪರಿಶೀಲಿಸದೆ ಬೀಗ ಹಾಕಿದ ಪರಿಣಾಮ ತರಗತಿಯಲ್ಲಿ ನಿದ್ದೆ ಮಾಡಿದ್ದ ಯು.ಕೆ.ಜಿ. ವಿದ್ಯಾರ್ಥಿನಿ ಒಂದು ಗಂಟೆ ಕೊಠಡಿಯ ಒಳಗಡೆಯೇ ಉಳಿದ ಘಟನೆ ಒಟ್ಟಪಾಲಂ ಎಂಬಲ್ಲಿ ಸೋಮವಾರ ನಡೆದಿದೆ.
ವಿದ್ಯಾರ್ಥಿನಿಯು ಸೋಮವಾರ ಸಂಜೆ ತರಗತಿಯಲ್ಲೇ ನಿದ್ದೆಗೆ ಜಾರಿದ್ದು ತರಗತಿಗೆ ಬೀಗ ಹಾಕಲು ಬಂದ ಶಿಕ್ಷಕಿ ತರಗತಿಯಲ್ಲಿ ವಿದ್ಯಾರ್ಥಿಗಳಿದ್ದಾರೆಯೇ ಎಂದು ಪರಿಶೀಲನೆ ನಡೆಸದೆ ಬೀಗ ಹಾಕಿದ್ದಾರೆ.
ಶಾಲಾ ಅವಧಿ ಮುಗಿದು ಒಂದು ಗಂಟೆ ಕಳೆದರು ವಿದ್ಯಾರ್ಥಿನಿ ಮನೆಗೆ ಹಿಂದಿರುಗದ ಕಾರಣದಿಂದಾಗಿ ವಿದ್ಯಾರ್ಥಿನಿಯನ್ನು ಹುಡುಕಾಡಿದ್ದು ಶಾಲೆಗೆ ಹೋದಾಗ ಬೀಗ ಜಡಿದ ತರಗತಿಯಲ್ಲೇ ಉಳಿದಿರುವುದು ತಿಳಿದು ಬಂದಿದೆ.
ಶಿಕ್ಷಕಿಯನ್ನು ವಿಚಾರಣೆ ನಡೆಸಿದ ಸಹಾಯಕ ಶಿಕ್ಷಣ ಅಧಿಕಾರಿ ವಿಚಾರಣೆಯ ಭಾಗವಾಗಿ ೫ ದಿನಗಳ ಕಾಲ ಶಾಲೆಗೆ ಹಾಜರಾಗದಂತೆ ತಿಳಿಸಿದ್ದಾರೆ.
"ಈ ಘಟನೆಯಲ್ಲಿ ಶಿಕ್ಷಕಿ ಪ್ರೀಮಾ ಫೇಸಿ ಅವರ ತಪ್ಪಿದೆ ಎಂದು ತಿಳಿದು ಬಂದಿದೆ. ಹಾಗೆಯೇ ತರಗತಿಯಲ್ಲಿ ವಿದ್ಯಾರ್ಥಿಗಳು ಉಳಿದಿದ್ದಾರೆಯೇ ಎಂದು ಗಮನಿಸದೆ ತರಗತಿಗೆ ಬೀಗ ಹಾಕಿರುವುದಾಗಿ ಶಿಕ್ಷಕಿ ತಪ್ಪೊಪ್ಪಿಕೊಂಡಿದ್ದಾರೆ. ಅವರು ತರಗತಿಗೆ ಬೀಗ ಹಾಕುವ ಮೊದಲು ತರಗತಿಯನ್ನು ಪರಿಶೀಲಿಸಬೇಕಿತ್ತು" ಎಂದು ಸಹಾಯಕ ಶಿಕ್ಷಣ ಅಧಿಕಾರಿ ಹೇಳಿದ್ದಾರೆ.
ಫೋಷಕರು ವಿದ್ಯಾರ್ಥಿನಿಯನ್ನು ಹುಡುಕಾಡುವ ವಿಡಿಯೋ ವೈರಲ್ ಆಗಿದ್ದು ಶಿಕ್ಷಕರ ಅಜಾಗರುಕತೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಈ ಮೊದಲು ಶಾಲೆಯಲ್ಲಿ ಹಾವು ಕಚ್ಚಿದ ವಿದ್ಯಾರ್ಥಿನಿಯನ್ನು ಚಿಕಿತ್ಸೆಗೆ ಕರೆದೊಯ್ಯಲು ಶಿಕ್ಷಕರು ತಡ ಮಾಡಿದ ಪರಿಣಾಮದಿಂದಾಗಿ ವಿದ್ಯಾರ್ಥಿನಿ ಮೃತ ಪಟ್ಟಿದ್ದಳು.