ನವದೆಹಲಿ, ಡಿ 11 (Daijiworld News/MB) : "ಪಾಕಿಸ್ಥಾನದಿಂದ ಬರುವ ಮುಸ್ಲಿಮರಿಗೆ ನಾವು ಭಾರತದ ಪೌರತ್ವ ನೀಡಬೇಕೆ" ಎಂದು ಗೃಹ ಮಂತ್ರಿ ಅಮಿತ್ ಶಾ ಪ್ರಶ್ನಿಸಿದ್ದಾರೆ.
ಬುಧವಾರ ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಮಂಡನೆಯಾದ ಬಳಿಕ ವಿರೋಧ ಪಕ್ಷದವರು ತೀವ್ರ ವಿರೋಧ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ಈ ಪ್ರಶ್ನೆಯನ್ನು ಅವರು ವಿರೋಧ ಪಕ್ಷಗಳಿಗೆ ಕೇಳಿದರು.
"ನಿಮಗೆ ಏನು ಬೇಕು? ನಾವು ಪಾಕಿಸ್ಥಾನದಿಂದ ಬರುವ ಮುಸ್ಲಿಮರಿಗೂ ಪೌರತ್ವ ನೀಡಬೇಕೆ? ಈ ರೀತಿ ಆದರೆ ದೇಶ ಹೇಗೆ ನಡೆಯುತ್ತದೆ?" ಎಂದು ಕೇಳಿದ್ದಾರೆ.
"ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನದಲ್ಲಿ ಹಿಂದೂಗಳು, ಸಿಖ್, ಜೈನರು, ಬೌದ್ಧರು, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಕಿರುಕುಳ ನೀಡಲಾಗುತ್ತಿದೆ. ಈ ಮಸೂದೆಯು ಈ ಜನರ ಘನತೆ ಹಾಗೂ ಜೀವವನ್ನು ರಕ್ಷಿಸುತ್ತದೆ" ಎಂದು ಸ್ಪಷ್ಟ ಪಡಿಸಿದ್ದಾರೆ.
"ಕೇಂದ್ರ ಸರಕಾರವು ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನದಲ್ಲಿ ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಮುಸ್ಲಿಮರಿಗೆ ಭಾರತೀಯ ಪೌರತ್ವ ನೀಡಲಾಗುವುದಿಲ್ಲ" ಎಂದು ಹೇಳಿದೆ.
ಪೌರತ್ವ ತಿದ್ದುಪಡಿ ಮಸೂದೆ ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು ಇಂದು ರಾಜ್ಯಸಭೆಯಲ್ಲಿ ಮಂಡನೆ ಮಾಡಲಾಗಿದ್ದು ಅಂಗೀಕಾರವಾಗುವ ಸಾಧ್ಯತೆ ಹೆಚ್ಚಿದೆ.