ನವದೆಹಲಿ,ಡಿ 12(Daijiworld News/MSP): ಪೌರತ್ವ ತಿದ್ದುಪಡಿ ಸಂಬಂಧಿಸಿದಂತೆ ಈಶಾನ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಇದಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಪ್ರಧಾನಿ ಮೋದಿ ಮೊದಲ ಬಾರಿಗೆ ಹೇಳಿಕೆ ನೀಡಿದ್ದು, " ಯಾರಿಗೂ ಅಸ್ಸಾಂ ಜನರ ಅಧಿಕಾರ, ಹಕ್ಕನ್ನೂ ಕಸಿದುಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರಧಾನಿ ಮೋದಿ ಸರಣಿ ಟ್ವೀಟ್ ಮಾಡಿ ಭರವಸೆ ನೀಡಿದ್ದು, " ಪೌರತ್ವ ಮಸೂದೆಯ ಬಗ್ಗೆ ಅನಗತ್ಯ ಭಯ ಬೇಡ, ಅಸ್ಸಾಂ ಜನರ ಸಂಸ್ಕೃತಿ, ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ನನ್ನ ಅಸ್ಸಾಂ ಮತ್ತು ಈಶಾನ್ಯ ಭಾರತದ ಸಹೋದರ-ಸಹೋದರಿಯರಿಗೆ ನಾನು ಈ ಮೂಲಕ ಭರವಸೆ ನೀಡುತ್ತೇನೆ, ಕೇಂದ್ರ ಸರ್ಕಾರ ಮತ್ತು ನಾನು ಅಸ್ಸಾಂ ಜನರ ರಾಜಕೀಯ, ಭಾಷಾ, ಸಾಂಸ್ಕೃತಿಕ ಮತ್ತು ಭೂ ಹಕ್ಕುಗಳನ್ನು ಸಾಂವಿಧಾನಿಕವಾಗಿ ರಕ್ಷಿಸಲು ಸಂಪೂರ್ಣವಾಗಿ ಬದ್ಧವಾಗಿದ್ದೇನೆ ಭಯ ಚಿಂತೆ ಬಿಡಿ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರತಿಭಟನೆ, ಹಿಂಸಾಚಾರ ಕೈಬಿಡುವಂತೆ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.