ಮುಂಬೈ, ಡಿ 12(Daijiworld News/MSP): ಡೇಟಿಂಗ್ ಸೈಟ್ ಬಳಸುವ ಮೊದಲು ಮೈಯಲ್ಲಾ ಕಣ್ಣಾಗಿರಬೇಕು. ಇದಕ್ಕೊಂದು ತಾಜಾ ಉದಾಹರಣೆ ಮುಂಬೈನ 63 ವೃದ್ದ ಡೇಟಿಂಗ್ ಸೈಟ್ನ ಆಸೆಗೆ ಬಿದ್ದು 73.5 ಲಕ್ಷ ಕಳೆದುಕೊಂಡಿರುವುದು..!
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳಮುಖಿ ಸೇರಿ ಮೂವರನ್ನು ಬಂಧಿಸಲಾಗಿದೆ. ಬಂಧಿತರನ್ನು ಸೋಧ್ಪುರ ನಿವಾಸಿ ಸ್ನೇಹಾ ಅಲಿಯಾಸ್ ಮಹಿ ದಾಸ್ ಮಹಿ ದಾಸ್ (25), ಮಂಡಲ್ಪಾರ ಮೂಲದ ಪ್ರಬೀರ್ ಸಹಾ (35) ಮತ್ತು ಹೌರಾದ ದುರ್ಗಾಪುರದ ಅರ್ನಾಬ್ ರಾಯ್ (26) ಎಂದು ಗುರುತಿಸಲಾಗಿದೆ. ವಂಚಕರು ಕೋಲ್ಕತ್ತಾದಲ್ಲಿ ನಕಲಿ ಕಾಲ್ ಸೆಂಟರ್ ತೆರೆದು ವೃದ್ದನನ್ನು ಡೇಟಿಂಗ್ ಸೈಟ್ಗೆ ದಾಖಲಿಸುವ ನೆಪದಲ್ಲಿ 73.5 ಲಕ್ಷ ರೂಪಾಯಿ ದೋಚಿದ್ದರು. ವೃದ್ದನನ್ನು ಬಣ್ಣದ ಮಾತಿನಿಂದ ಮರಳು ಮಾಡಿ ಹಣ ಪಡೆದು ಸ್ಪೀಡ್ ಡೇಟಿಂಗ್ ಸದಸ್ಯತ್ವ ನೀಡಿದ್ದಾರೆ. ಮಾತ್ರವಲ್ಲದೇ ಮೊಬೈಲ್ ನಲ್ಲಿ ನೀಡಿದ ಸ್ಥಳಕ್ಕೆ ಡೇಟಿಂಗ್ ಗಾಗಿ ಹುಡುಗಿಯರನ್ನು ಕಳುಹಿಸುವುದಾಗಿ ಹೇಳಿದ್ದಾರೆ.
ಆದ್ರೆ ಡೇಟಿಂಗ್ ಗಾಗಿ ಮಹಿಳೆಯರನ್ನು ಕಳಿಸದೆ ಇರೋದ್ರಿಂದ ವೃದ್ದ ಸದಸ್ಯತ್ವ ರದ್ದು ಮಾಡುವಂತೆ ಕೇಳಿಕೊಂಡಿದ್ದಾರೆ. ಆದ್ರೆ ವಂಚಕರು ಅತಿಯಾದ ರದ್ದತಿ ಶುಲ್ಕಕ್ಕಾಗಿ ಒತ್ತಾಯಿಸಿದ್ದು, ನಿರಾಕರಿಸಿದಾಗ ಹುಡುಗಿಗೆ ಬೇಡಿಕೆಯಿಟ್ಟ ಕಾರಣ ಈ ಬಗ್ಗೆ ದೂರು ನೀಡುವುದಾಗಿ ಬೆದರಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಾನ ತೆಗೆಯುವುದಾಗಿ ಬೆದರಿಸಿದ್ದಾರೆ. ನಕಲಿ ಕಾನೂನು ನೊಟೀಸ್ ನೀಡಿ ಹಣ ದೋಚಲು ಶುರು ಮಾಡಿದ್ದಾರೆ. ಸಾಮಾಜಿಕ ಕಳಂಕಕ್ಕೆ ಹೆದರಿ ವಂಚಕರಿ 73.5 ಕೋಟಿ ನೀಡಿದ ವೃದ್ಧ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಪೊಲೀಸರು ವಂಚಕರನ್ನು ಬಂಧಿಸಿದ್ದಾರೆ.