ಅಯೋಧ್ಯೆ, ಡಿ 13(Daijiworld News/MSP):"ಅತ್ಯಾಚಾರದ ಆರೋಪಿಗಳನ್ನು ಹತ್ಯೆ ಮಾಡಿದ್ರೆ ಅಂತವರಿಗೆ ಒಂದು ಲಕ್ಷ ರೂಪಾಯಿ ಬಹುಮಾನದ ರೂಪದಲ್ಲಿ ನೀಡಲಾಗುವುದು ಎಂದು ಅಯೋಧ್ಯೆಯ ಹನುಮಾನ್ ಗರಿ ದೇವಸ್ಥಾನದ ಅರ್ಚಕ ರಾಜು ದಾಸ್ ವಿವಾದಾತ್ಮಕ ಘೋಷಣೆ ಘೋಷಿಸಿದ್ದಾರೆ. ಒಂದು ವೇಳೆ ಅತ್ಯಾಚಾರದ ಆರೋಪಿಗಳನ್ನು ಪೊಲೀಸರು ಕೊಂದರೆ, ಅವರ ಕುಟುಂಬ ಅಗತ್ಯವಾದ ಸಹಾಯ ಮಾಡಲು ತಯಾರಿದ್ದೇವೆ ಹೇಳಿದ್ದಾರೆ.
ಕಾನೂನು ಸಮ್ಮತಿಸದ ಈ ಬಹುಮಾನ ಘೋಷಣೆಗಳನ್ನು ಏಕೆ ಮಾಡುತ್ತಿದ್ದೀರಿ ಎಂದು ದಾಸ್ ಅವರನ್ನು ಪ್ರಶ್ನಿಸಿದ್ರೆ, "ಮಹಿಳೆಯ ಮೇಲೆ ಅತ್ಯಾಚಾರದಂತಹ ದೌರ್ಜನ್ಯ ಹೆಚ್ಚುತ್ತಿದ್ದು, ಇಂತಹ ಅಪರಾಧ ಕೃತ್ಯಗಳನ್ನು ಮಾಡುವವರು ನಮ್ಮ ನಡುವೆಯೇ ಇದ್ದಾರೆ. ಮಹಿಳೆಯರು ಮಾತ್ರವಲ್ಲ ಪುಟ್ಟ ಮಕ್ಕಳೆಂದು ನೋಡದೇ ದೌರ್ಜನ್ಯವೆಸಗುವ ಕೆಟ್ಟ ಮನಸ್ಥಿತಿಯವರಿದ್ದಾರೆ
"ಜಬ್ ತಕ್ ಪಾರ್ ಸಮಾಜ್ ಸಜಾಗ್ ನಹಿ ಹೊಗಾ, ತಬ್ ತಕ್ ಇಸ್ಪೆ ಬ್ಯಾನ್ ನಹಿ ಲಗೆಗಾ (ನಮ್ಮ ಸಮಾಜ ಎಚ್ಚೆತ್ತುಕೊಳ್ಳದವರೆಗೆ ಅಂತಹ ಅಪರಾಧಗಳು ನಿಲ್ಲುವುದಿಲ್ಲ)" ಎಂದು ಹೇಳುತ್ತಾರೆ
ಅಯೋಧ್ಯೆ ಪೊಲೀಸ್ ಅಧಿಕಾರಿ ಅಮರ್ ಸಿಂಗ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು “ಇಂತಹ ಯಾವುದೇ ಹೇಳಿಕೆಯ ಬಗ್ಗೆ ನಮಗೆ ತಿಳಿದಿಲ್ಲ. ಇದನ್ನು ಸಾರ್ವಜನಿಕ ವೇದಿಕೆ ಅಥವಾ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದರೆ, ನಾವು ಅದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ" ಎಂದಿದ್ದಾರೆ.