ನವದೆಹಲಿ, ಡಿ 13(Daijiworld News/MSP): ಪಬ್ ಜೀ ಆಟದಲ್ಲಿ ತಲ್ಲೀನನಾದ ಯುವಕನೋರ್ವ ರಾಸಾಯನಿಕ ಕುಡಿದು ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಗ್ವಾಲಿಯರ್ ನ ಚಂದ್ರಬಾಲಿ ನಾಕಾದ ಝಾನ್ಸಿ ರಸ್ತೆಯ ನಿವಾಸಿ 20 ವರ್ಷದ ಸೌರಭ್ ಹಾಗೂ ಆತನ ಸ್ನೇಹಿತ ಸಂತೋಷ್ ಶರ್ಮಾ ಸ್ವರ್ಣ ಜಯಂತಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದು , ಈ ವೇಳೆ ಇವರಿಬ್ಬರು ಪಬ್ ಜೀ ಗೇಮ್ ಆಟವಾಡತೊಡಗಿದರು. ಈ ವೇಳೆ ಸೌರಭ್ ಗೆ ಬಾಯಾರಿಕೆಯಾಗಿದ್ದು ಆಡುದರಲ್ಲಿ ತಲ್ಲೀನನಾಗಿದ್ದ ಈತ ತಮ್ಮ ಬ್ಯಾಗ್ ನಲ್ಲಿ ಇರಿಸಿದ್ದ ಕೆಮಿಕಲ್ ಬಾಟಲಿಯನ್ನು ನೀರೆಂದು ಕುಡಿದಿದ್ದಾನೆ.
ತಾನು ಕುಡಿದಿರುವುದು ನೀರೋ ಅಥವಾ ರಾಸಾಯನಿಕವೋ ಎನ್ನುವ ವಿಚಾರ ಆ ಕ್ಷಣಕ್ಕೆ ಅರಿವಿಗೆ ಬಾರದೆ ಮತ್ತೆ ಪಬ್ ಜೀ ಆಡುವುದನ್ನು ಮುಂದುವರಿಸಿದ್ದಾರೆ ಕೆಲ ಸಮಯದ ಬಳಿಕ ಸೌರಭ್ ತೀವ್ರ ಅಸ್ವಸ್ಥಗೊಂದಿದ್ದಾನೆ. ಆದರೆ ದುರಾದೃಷ್ಟವಶಾತ್ ರೈಲಿನಲ್ಲಿ ಯಾವುದೇ ವೈದ್ಯಕೀಯ ಚಿಕಿತ್ಸೆ ಲಭ್ಯವಾಗಿಲ್ಲ. ಅಸ್ವಸ್ಥಗೊಂಡ ಸೌರಬ್ ಚೈನ್ ಎಳೆದು ರೈಲು ನಿಲ್ಲಿಸಿದ್ದಾನೆ.
ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದರೂ ವೈದ್ಯಕೀಯ ಸಹಾಯ ರೈಲಿನಲ್ಲಿ ಸಿಕ್ಕಿಲ್ಲ. ಹೀಗಾಗಿ ತೀವ್ರ ಆಸ್ವಸ್ಥನಾದ ಸೌರಭ್ ಮೃತಪಟ್ಟಿದ್ದು ಆಗ್ರಾದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಮೃತದೇಹ ತರಲಾಯಿತು.