ಹೈದರಾಬಾದ್, ಡಿ 14 (Daijiworld News/MB) : ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಬೆನ್ನಲ್ಲೇ ಈಗ ಹೈದರಾಬಾದ್ನಲ್ಲೆ 18 ವರ್ಷದ ಯುವತಿ ಮೇಲೆ ಆಟೋ ಚಾಲಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
ಈ ಘಟನೆ ಡಿಸೆಂಬರ್ 8ರಂದು ನಗರದ ಚಂದ್ರಯಂಗುಟ್ಟ ಪ್ರದೇಶದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಡಿಸೆಂಬರ್ 8ರ ರಾತ್ರಿ ಯುವತಿ ಹಾಗೂ ಆಕೆಯ 10 ವರ್ಷದ ಸಹೋದರಿ ಇಬ್ಬರೂ ಅಜ್ಜಿ ಮನೆಗೆ ತೆರಳುವಾಗ ದಾರಿ ತಪ್ಪಿದ್ದು ಆಟೋ ರಿಕ್ಷಾ ಚಾಲಕನಾಗಿದ್ದ ಆರೋಪಿಯ ಹಿರಿಯ ಸಹೋದರ ಹುಡುಗಿಯರನ್ನು ಮನೆಗೆ ಕರೆದದುಕೊಂದು ಬಂದಿದ್ದಾನೆ. ಇದನ್ನು ಕಂಡ ಆರೋಪಿಗಳ ತಾಯಿ, ಮಕ್ಕಳನ್ನು ಅವರ ಮನೆಗೆ ಬಿಡುವಂತೆ ಕಿರಿಯ ಮಗನಿಗೆ ಹೇಳಿದ್ದು ಆತನು ಮನೆಗೆ ಬಿಡುವ ನೆಪದಲ್ಲಿ ನಾಂಪಲ್ಲಿಯ ಪ್ರದೇಶದ ಲಾಡ್ಜಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಲಾಡ್ಜಿನಲ್ಲಿ ಯುವತಿಯ ಕಿರಿಯ ಸಹೋದರಿ ನಿದ್ದೆಗೆ ಜಾರಿದ ಸಂದರ್ಭದಲ್ಲಿ ಆರೋಪಿಯು ಯುವತಿ ಮೇಲೆ ಅತ್ಯಾಚಾರ ಮಾಡಿದ್ದು ಮರುದಿನ ಇಬ್ಬರನ್ನೂ ಫಲಕ್ನುಮಾ ರೈಲು ನಿಲ್ದಾಣದ ಬಳಿ ಇಳಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲ್ವೇ ನಿಲ್ದಾಣದಲ್ಲಿದ್ದ ಯುವತಿಯರು ತಮ್ಮ ಸಂಬಂಧಿಕರನ್ನು ಸಂಪರ್ಕ ಮಾಡಿದ್ದು ಮನೆಗೆ ಸೇರಿ ಈ ಕುರಿತು ಮನೆಯವರಿಗೆ ತಿಳಿಸಿದ್ದಾರೆ. ಈ ಸಂಬಂಧ ಕುಟುಂಬಸ್ಥರು ದೂರು ನೀಡಿದ್ದಾರೆ. ಯುವತಿ ಹಾಗೂ ಆಕೆಯ ಸಹೋದರಿ ಅಜ್ಜಿಯ ಮನೆಗೆ ತಲುಪ್ಪದನ್ನು ತಿಳಿದ ಮನೆಯವರು ಈ ಮೊದಲೇ ಮಕ್ಕಳು ಕಾಣೆಯಾಗಿರುವ ಕುರಿತು ದೂರು ದಾಖಲು ಮಾಡಿದ್ದರು.