ತಮಿಳುನಾಡು, ಡಿ 14 (Daijiworld News/MB) : 33 ವರ್ಷದ ಅಕ್ಕಸಾಲಿಗ ಲಾಟರಿಯಿಂದಾಗಿ ಆರ್ಥಿಕ ಸಂಕಷ್ಟ ಅನುಭವಿಸಿದ ಕಾರಣಕ್ಕೆ ಪತ್ನಿಯನ್ನು ಹಾಗೂ ಮೂವರು ಮಕ್ಕಳನ್ನು ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ವ್ಯಕ್ತಿ ಅರುಣ್ ಆಗಿದ್ದು ಆತ ತನ್ನ ಪತ್ನಿ ಎಂ.ಶಿವಗಾಮಿ (26) , ಪ್ರಿಯಾದರ್ಶಿನಿ (4) ಯುವಶ್ರೀ (3) ಹಾಗೂ ಭಾರತಿ (3 ತಿಂಗಳು) ಎಂಬ ಮಕ್ಕಳನ್ನು ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡುವ ಮುನ್ನ ವಿಡಿಯೋ ಮಾಡಿದ್ದು ಅದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಅರುಣ್ "ರಾಜ್ಯದಲ್ಲಿ ಎಲ್ಲಾ ರೀತಿಯ ಲಾಟರಿಗಳು 15 ವರ್ಷಗಳಿಂದ ನಿಷೇಧವಾಗಿದ್ದರು ಅಕ್ರಮವಾಗಿ ಲಾಟರಿಯನ್ನು ದಂದೆ ನಡೆಯುತ್ತಿದೆ. ಇದನ್ನು ತಡೆಗಟ್ಟಬೇಕು. ಅದರಿಂದಾಗಿ ಇದೇ ರೀತಿಯ ಆರ್ಥಿಕ ತೊಂದರೆ ಅನುಭವಿಸುತ್ತಿರುವ 10 ಕುಟುಂಬವಾದರೂ ಬದುಕಿ ಉಳಿಯ ಬಹುದು" ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಮಾತಾನಾಡಿದ ವಿಲ್ಲುಪುರಂ ಜಿಲ್ಲಾ ಪೊಲೀಸ್ ಅಧೀಕ್ಷಕ ಎಸ್.ಜಯಕುಮಾರ್ " ಅಕ್ರಮ ಲಾಟರಿ ದಂದೆಯ ವಿರುದ್ಧ ಪೊಲೀಸ್ ಇಲಾಖೆ ನಿರಂತರವಾಗಿ ಕ್ರಮಕೈಗೊಳ್ಳುತ್ತಿದ್ದೇವೆ. ಅರುಣ್ ಆನ್ಲೈನ್ ಲಾಟರಿ ಗೀಳಿಗೆ ತುತ್ತಾಗಿರಬೇಕು. ಈ ಕುರಿತು ತನಿಖೆ ನಡೆಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.