ನವದೆಹಲಿ, ಡಿ 14 (Daijiworld News/MB) : "ಕ್ಷಮೆಯಾಚಿಸಲ್ಲ, ನಾನು ರಾಹುಲ್ ಸಾವರ್ಕರ್ ಅಲ್ಲ. ಸತ್ಯ ಹೇಳಿ ನಾನು ಎಂದಿಗೂ ಕ್ಷಮೆ ಕೇಳುವುದಿಲ್ಲ" ಎಂದು ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ಪೌರತ್ವ ತಿದ್ದು ಪಡಿ ಮಸೂದೆ ವಿರುದ್ದ ದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಬಚಾವೋ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ಪ್ರಸ್ತುತ ವಿಚಾರ ಇರುವುದು ನನ್ನ ಹೇಳಿಕೆಯ ಕುರಿತು ಅಲ್ಲ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಈಶಾನ್ಯ ರಾಜ್ಯಗಳಿಗೆ ಪೌರತ್ವ ಮಸೂದೆ ಮುಖಾಂತರ ಬೆಂಕಿ ಹಚ್ಚಿದ್ದಾರೆ. ಜನರ ಗಮನವನ್ನು ಆ ವಿಷಯದಿಂದ ಬೇರೆಡೆಗೆ ಸೆಳೆಯುವ ನಿಟ್ಟಿನಲ್ಲಿ ನನ್ನ ಹೇಳಿಕೆಯ ಕುರಿತು ಚರ್ಚೆ ಮಾಡುತ್ತಿದ್ದಾರೆ" ಎಂದು ದೂರಿದರು.
"ಬಿಜೆಪಿ ನಾಯಕರು ನನ್ನ ಹೇಳಿಕೆಗೆ ಕ್ಷಮೆ ಕೇಳುವಂತೆ ಹೇಳುತ್ತಿದ್ದಾರೆ. ಆದರೆ ನಾನು ಸತ್ಯವನ್ನು ಹೇಳಿದ್ದೇನೆ. ನಾನು ಕ್ಷಮೆ ಕೇಳಲು ರಾಹುಲ್ ಸಾವರ್ಕರ್ ಅಲ್ಲ. ನನ್ನ ಹೆಸರು ರಾಹುಲ್ ಗಾಂಧಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರ ರಾಜಧಾನಿ ದೆಹಲಿಯನ್ನು ರೇಪ್ ಕ್ಯಾಪಿಟಲ್ ಎಂದು ಈ ಮೊದಲು ಹೇಳಿದ್ದಾರೆ. ಅದು ಈಗಲೂ ನನ್ನ ಮೊಬೈಲ್ನಲ್ಲಿ ಇದೆ. ಅದನ್ನು ನಾನು ಟ್ವೀಟ್ ಮಾಡುತ್ತೇನೆ" ಎಂದು ತಿಳಿಸಿದ್ದಾರೆ.
"ನಾನು, ಭಾರತದ ವಿವಿಧ ಬಾಗಗಳಲ್ಲಿ ನಿರಂತರವಾಗಿ ಅತ್ಯಾಚಾರ ಸುದ್ದಿಯಾಗುತ್ತಿದೆ. ಮಹಿಳೆಯ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿದೆ. ನಾವು ಮೇಕ್ ಇನ್ ಇಂಡಿಯಾ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಮಾತಾನಾಡಿದ್ದನ್ನು ನೋಡುತ್ತೇನೆ ಅಂದುಕೊಂಡಿದ್ದೆ ಆದರೆ ದಿನ ಪತ್ರಿಕೆಗಳಲ್ಲಿ ರೇಪ್ ಇನ್ ಇಂಡಿಯಾ ಸುದ್ದಿಗಳೇ ಇವೆ ಎಂದು ಹೇಳಿದ್ದೆ" ಎಂದು ತನ್ನ ಹೇಳಿಕೆಯ ಸಮರ್ಥನೆ ಮಾಡಿಕೊಂಡರು.
"ಉನ್ನಾವೋದಲ್ಲಿ ಬಿಜೆಪಿ ಶಾಸಕರೇ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಸಂತ್ರಸ್ಥೆ ಆಘಾತಕ್ಕೆ ಒಳಗಾಗುವಂತೆ ಮಾಡಲಾಗಿದೆ. ಆದರೆ ಮೋದಿಯವರು ಈ ಕುರಿತು ಏನು ಮಾತಾನಾಡುವುದಿಲ್ಲ. ಮೋದಿಯವರು ಹಿಂಸಾಚಾರವನ್ನೇ ಹುಬ್ಬುತ್ತಿದ್ದಾರೆ. ಈ ಹಿಂಸಾಚಾರ ನಮ್ಮ ಈಡೀ ದೇಶವನ್ನೇ ಹೊತ್ತಿಕೊಳ್ಳುವಂತೆ ಮಾಡುತ್ತಿದೆ" ಎಂದು ಹೇಳಿದ್ದಾರೆ.