ನವದೆಹಲಿ, ಡಿ 14 (Daijiworld News/MB) : ರಾಹುಲ್ ಗಾಂಧಿ ರೇಪ್ ಇನ್ ಇಂಡಿಯಾಕ್ಕೆ ಕ್ಷಮೆ ಕೇಳಲ್ಲ. ನಾನು ರಾಹುಲ್ ಸಾವರ್ಕರ್ ಅಲ್ಲ. ರಾಹುಲ್ ಗಾಂಧಿ ಎಂದು ಹೇಳಿದ ಬೆನ್ನಲ್ಲೇ ಬಿಜೆಪಿ ನಾಯಕ ಸಂಬಿತ್ ಪಾತ್ರ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿ "ರಾಹುಲ್ ಗಾಂಧಿ ವೀರ ಸಾವರ್ಕರ್ ಆಗಲೂ ಸಾಧ್ಯವಿಲ್ಲ. ಅವರಿಗೆ ಹೊಸ ಹೆಸರು ಬೇಕಾಗಿದೆ. ಬಿಜೆಪಿ ಅವರನ್ನು "ರಾಹುಲ್ ತೋಡಾ ಶರಮ್ ಕರ್" (ರಾಹುಲ್ ಸ್ವಲ್ಪ ನಾಚಿಕೆಪಡು) ಎಂದು ಕರೆಯುತ್ತೇವೆ" ಎಂದು ಹೇಳಿದ್ದಾರೆ.
370 ವಿಧಿ, ಬಾಲಕೋಟ್ ವಾಯುದಾಳಿ, ಸರ್ಜಿಕಲ್ ಸ್ಟ್ರೈಕ್ ಹಾಗೂ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಪಾಕಿಸ್ಥಾನದವರಂತೆ ಮಾತಾನಾಡುವ ರಾಹುಲ್ ಗಾಂಧಿ ದೇಶಪ್ರೇಮಿ ವೀರ ಸಾವರ್ಕರ್ ಆಗಲೂ ಸಾಧ್ಯವೇ ಇಲ್ಲ. ಮೇಕ್ ಇನ್ ಇಂಡಿಯಾವನ್ನು ರೇಪ್ ಇನ್ ಇಂಡಿಯಾಗೆ ತುಲನೆ ಮಾಡುವ ರಾಹುಲ್ ತನ್ನ ಎಲ್ಲಾ ಮಿತಿಗಳನ್ನು ಮೀರಿದ್ದಾರೆ" ಎಂದು ದೂರಿದ್ದಾರೆ.
ಪೌರತ್ವ ತಿದ್ದು ಪಡಿ ಮಸೂದೆ ವಿರುದ್ದ ದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಬಚಾವೋ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ಕ್ಷಮೆಯಾಚಿಸಲು ನಾನು ರಾಹುಲ್ ಸಾವರ್ಕರ್ ಅಲ್ಲ. ಸತ್ಯ ಹೇಳಿ ನಾನು ಎಂದಿಗೂ ಕ್ಷಮೆ ಕೇಳುವುದಿಲ್ಲ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಈಶಾನ್ಯ ರಾಜ್ಯಗಳಿಗೆ ಪೌರತ್ವ ಮಸೂದೆ ಮುಖಾಂತರ ಬೆಂಕಿ ಹಚ್ಚಿದ್ದಾರೆ. ಜನರ ಗಮನವನ್ನು ಆ ವಿಷಯದಿಂದ ಬೇರೆಡೆಗೆ ಸೆಳೆಯುವ ನಿಟ್ಟಿನಲ್ಲಿ ನನ್ನ ಹೇಳಿಕೆಯ ಕುರಿತು ಚರ್ಚೆ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.