ಬೆಂಗಳೂರು, ಡಿ 15 (Daijiworld News/MB) : ತರಕಾರಿ ವ್ಯಾಪಾರಿಯೊಬ್ಬ ಕೇವಲ ಒಂದು ವರ್ಷದಲ್ಲೇ 70 ಬಾರಿ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ್ದು ಪೊಲೀಸರು ಆತನಿಂದ 15,400 ರೂಪಾಯಿ ವಸೂಲಿ ಮಾಡಿದ್ದಾರೆ.
ದಂಡ ಶಿಕ್ಷೆಗೆ ಗುರಿಯಾದವನು ಲಗ್ಗರೆ ನಿವಾಸಿ ಮಂಜುನಾಥ 2 ದಿನಗಳ ಹಿಂದೆ ಹೆಲ್ಮೆಟ್ ಇಲ್ಲದೆ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ರಾಜಾಜಿನಗರ ಸಂಚಾರ ಪೊಲೀಸರಿಗೆ ಮಹಾ ಲಕ್ಷ್ಮೀ ಲೇಔಟ್ನ ಶಂಕರ ನಗರ ಬಸ್ ನಿಲ್ದಾಣ ಸಮೀಪ ಸಿಕ್ಕಿ ಬಿದಿದ್ದು ಸಂಚಾಎ ಪೊಲೀಸರು ಪಿಡಿಎ ಯಂತ್ರದಲ್ಲಿ ವಾಹನ ಸಂಖ್ಯೆ ನಮೂದಿಸಿದಾಗ ಒಂದೇ ವರ್ಷದಲ್ಲಿ 70 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಗಮನಕ್ಕೆ ಬಂದಿದೆ.
70 ಪ್ರಕರಣಗಳು ಇದ್ದ ಕಾರಣದಿಂದಾಗಿ ಪೊಲೀಸರು ಸ್ಕೂಟರ್ ಅನ್ನು ಜಪ್ತಿ ಮಾಡಿ 15,400 ರೂಪಾಯಿ ದಂಡದ ಚಲನ್ ಅನ್ನು ಮಂಜುನಾಥ್ಗೆ ನೀಡಿದ್ದಾರೆ. ಮಂಜುನಾಥ್ ಈ ದಂಡವನ್ನು ಶನಿವಾರ ಪಾವತಿ ಮಾಡಿ ತಮ್ಮ ಸ್ಕೂಟರ್ ಅನ್ನು ಬಿಡಿಸಿ ಕೊಂಡಿದ್ದಾರೆ.
ಮಂಜುನಾಥ್ ವಿಜಯನಗರದ ಬಸ್ ನಿಲ್ದಾಣದಲ್ಲಿ ತರಕಾರಿ ವ್ಯಾಪಾರಿಯಾಗಿದ್ದು ತನ್ನ ತಂದೆ ಹೆಸರಲ್ಲಿ ಸ್ಕೂಟರ್ ಖರಿದೀಸಿದ್ದಾರೆ. ಒಂದು ವರ್ಷದಲ್ಲಿ 70 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದು ಈವರೆಗೂ ಪೊಲೀಸರಿಗೆ ಸಿಕ್ಕಿ ಬಿದ್ದಿರಲಿಲ್ಲ.