ಹೈದರಾಬಾದ್, ಡಿ 15 (Daijiworld News/MB) : ಹೈದರಾಬಾದ್ನಲ್ಲಿ ಪಶುವೈದ್ಯೆಯ ಅತ್ಯಾಚಾರ ಹತ್ಯೆ ಪ್ರಕರಣದ ಬೆನ್ನಲ್ಲೇ ಆಟೋ ಚಾಲಕ 18 ವರ್ಷದ ಯುವತಿ ಮೇಲೆ ಅತ್ಯಾಚಾರ ಮಾಡಿದ್ದ. ಈಗ 14 ವರ್ಷದ ಅಪ್ರಾಪ್ತೆಯ ಮೇಲೆ ನೆರೆಮನೆಯ ಯುವಕ ಅತ್ಯಾಚಾರ ಮಾಡಿದ ಘಟನೆ ಹೈದರಾಬಾದ್ನಲ್ಲೇ ನಡೆದಿದೆ.
ಅಪ್ರಾಪ್ತ ಬಾಲಕಿಯು ಶನಿವಾರ ಮಧ್ಯಾಹ್ನ ಮನೆಯ ಹೊರಗಡೆ ನಿಂತಿದ್ದಾಗ ಬಾಲಕನು ಅಪ್ರಾಪ್ತೆ ಬಾಲಕಿಯನ್ನು ಪುಸಲಾಯಿಸಿ ಮನೆಗೆ ಕರೆದೊಯಯ್ದು ಅತ್ಯಾಚಾರ ನಡೆಸಿದ್ದಾನೆ.
ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಯುವಕನು 18 ರಿಂದ 19 ವರ್ಷದ ಯುವಕನಾಗಿದ್ದು ಆತನ ಬಂಧನಕ್ಕಾಗಿ ಪೊಲೀಸರು ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.