ನಾಗಪುರ, ಡಿ 16 (Daijiworld News/MB) : "ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಟೀ ಮಾರಾಟ ಮಾಡುತ್ತಿದ್ದರಿಂದ ಹಾಗಾಗಿ ಬಿಜೆಪಿ ನಾಯಕರಿಗೆ ಟೀ ಆಗಲ್ಲ" ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಮಹಾರಾಷ್ಟ್ರ ಅಧಿವೇಶನಕ್ಕೂ ಮುನ್ನ ಸರಕಾರ ಆಯೋಜಿಸುವ ಸಾಂಪ್ರದಾಯಿಕ ಔತಣಕೂಟಕ್ಕೆ (ಟೀ ಪಾರ್ಟಿ) ಬಿಜೆಪಿ ನಾಯಕರು ಗೈರು ಹಾಜಾರಗಿದ್ದರು. ಈ ಕುರಿತು ಮಾತಾನಾಡಿದ ಉದ್ಧವ್ ಠಾಕ್ರೆ "ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಟೀ ಮಾರಾಟ ಮಾಡುತ್ತಿದ್ದರಿಂದ ಹಾಗಾಗಿ ಬಿಜೆಪಿ ನಾಯಕರಿಗೆ ಟೀ ಆಗಲ್ಲ" ಎಂದು ವ್ಯಂಗ್ಯ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಿಂದುತ್ವದ ಪ್ರತಿಪಾದಕ ವೀರ್ ಸಾವರ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಅಂತವರ ಜೊತೆ ಶಿವಸೇನೆ ಮೈತ್ರಿ ಸರಕಾರ ರಚನೆ ಮಾಡಿದೆ ಎಂದು ವಿವಿಧ ಕಾರಣಗಳನ್ನು ಹೇಳಿ ಬಿಜೆಪಿ ನಾಯಕರು ಔತಣಕೂಟಕ್ಕೆ ತೆರಳಿರಲಿಲ್ಲ.
"ನಮಗೆಲ್ಲರಿಗೂ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೀವನದ ಕುರಿತು ತಿಳಿದಿದೆ. ಅವರು ಒಂದು ಕಾಲದಲ್ಲಿ ಟೀ ಮಾರಾಟ ಮಾಡುತ್ತಿದ್ದರು. ಹಾಗಿದ್ದರೂ ನಮ್ಮ ರಾಜ್ಯದ ಬಿಜೆಪಿ ನಾಯಕರು ಟೀ ಕುಡಿಯಲು ಯಾಕೆ ಬರಲಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಬಹುಶಃ ಮಹಾರಾಷ್ಟ್ರ ಬಿಜೆಪಿ ಘಟಕದ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಯಾವುದೋ ವಿಷಯದಲ್ಲಿ ಭಿನ್ನಾಭಿಪ್ರಾಯ ಇರಬೇಕು" ಎಂದು ಹೇಳಿದ್ದಾರೆ.