ಅಸ್ಸಾಂ, ಡಿ 16(Daijiworld News/MSP): ಪೌರತ್ವ ಮಸೂದೆ ಬಳಿಕ ಭುಗಿಲೆದ್ದ ಪತ್ರಿಭಟನೆ ಹಿಂಸಾಚಾರದ ಹಿನ್ನಲೆಯಲ್ಲಿ, ಭದ್ರತಾ ದೃಷ್ಠಿಯಿಂದ ಅಸ್ಸಾಂ ನಲ್ಲಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಿರುವದನ್ನು ಮುಂದುವರಿಸಲಾಗಿದೆ.
ಬುಧವಾರದಿಂದ ಅಸ್ಸಾಂ ನ ಹಲವೆಡೆ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗಿಳಿಸಲಾಗಿತ್ತು. ಇದನ್ನು ಸೋಮವಾರದಂದು ಇನ್ನೂ 24 ಗಂಟೆಗಳ ಕಾಲ ವಿಸ್ತರಿಸಲಾಯಿತು.
ಅಸ್ಸಾಂನ 10 ಜಿಲ್ಲೆಗಳಾದ ಲಖಿಂಪುರ, ಟಿನ್ಸುಕಿಯಾ, ಧೆಮಾಜಿ,ದಿಬ್ರುಗರ್, ಚರೈಡಿಯೊ, ಶಿವಸಾಗರ್, ಜೋರ್ಹತ್, ಗೋಲಾಘಾಟ್, ಕಮ್ ರುಪ್ (ಮೆಟ್ರೋ) ಮತ್ತು ಕಮ್ರೂಪ್ ಗಳಲ್ಲಿ ಸೇವೆ ಸ್ಥಗಿತಗೊಳಿಸಲಾಗಿದೆ. ಏತನ್ಮಧ್ಯೆ, ಅಸ್ಸಾಂನ ಹಲವು ಕಡೆಗಳಲ್ಲಿ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ ಎಂದು ಅಸ್ಸಾಂ ಪೊಲೀಸರು ಹೇಳಿದ್ದಾರೆ.
"ರಾಜ್ಯದ ಪರಿಸ್ಥಿತಿ ಅಪಾರವಾಗಿ ಸುಧಾರಿಸಿದೆ. ಇದಕ್ಕಾಗಿ ಕಾನೂನನ್ನು ಗೌರವಿಸಿ ಪ್ರತಿಭಟನೆ ಹಿಂಪಡೆದದಕ್ಕೆ ಅಸ್ಸಾಂ ಜನರಿಗೆ ಧನ್ಯವಾದಗಳು. ಗುವಾಹಟಿಯಲ್ಲಿ ಡಿಸೆಂಬರ್ 16 ರ ಬೆಳಗ್ಗೆ 6 ಗಂಟೆಯಿಂದ ಹಗಲಿನಲ್ಲಿ ಕರ್ಫ್ಯೂ ಹಿಂತೆಗೆದುಕೊಳ್ಳಲಾಗಿದೆ. ರಾತ್ರಿ 9 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಮುಂದುವರಿಸಲಾಗಿದೆ ಎಂದು ಅಸ್ಸಾಂ ಪೊಲೀಸರು ಟ್ವೀಟ್ ಮಾಡಿದ್ದಾರೆ.