ವಿಜಯಪುರ, ಡಿ 16 (Daijiworld News/MB) : ಪಾಲಕರು ಖರ್ಚಿಗೆ ಹಣ ನೀಡಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಸಬವಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ನಡೆದಿದೆ.
30 ವರ್ಷದ ಈರಪ್ಪ ಬಿರಾದಾರ ನೇಣಿಗೆ ಶರಣಾದ ಯುವಕ.
ಪಾಲಕರು ತನ್ನ ಖರ್ಚಿಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನನೊಂದ ಯುವಕ ಜಮೀನಿನಲ್ಲಿದ್ದ ಮರವೊಂದಕ್ಕೆ ತನ್ನ ಅಂಗಿಯಿಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಪ್ರಕರಣ ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.