ನವದೆಹಲಿ, ಡಿ 17 (Daijiworld News/MB) :"ನಾವು ನಮ್ಮನ್ನು ವಿಭಜಿಸಲು ಹಾಗೂ ಗೊಂದಲು ಸೃಷ್ಟಿಸಲು ಪಟ್ಟಭದ್ರಹಿತಾಸಕ್ತಿಗಳಿಗೆ ಅವಕಾಶ ನೀಡಲಾರೆವು" ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಟ್ವೀಟರ್ನಲ್ಲಿ ಟ್ವೀಟ್ ಮಾಡಿರುವ ಅವರು, "ಈ ಮಸೂದೆ ಕೇವಲ ಹೊರದೇಶದಲ್ಲಿರುವ ಕಿರುಕುಳಕ್ಕೆ ಒಳಗಾಗಿ ಬೇರೆ ಯಾವ ದೇಶಕ್ಕೂ ಹೋಗಲಾಗದೆ ಭಾರತಕ್ಕೆ ಬರುವವರಿಗೆ ಮಾತ್ರ. ಇದರಿಂದಾಗಿ ನಮ್ಮ ದೇಶದಲ್ಲಿ ಇರುವ ಯಾವುದೇ ಧರ್ಮದವರಿಗೂ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಕುರಿತು ಚಿಂತೆ ಬೇಡ" ಎಂದು ಹೇಳಿದ್ದಾರೆ.
"ಈ ಸಂದರ್ಭದಲ್ಲಿ ನಾವು ದೇಶದ ಅಭಿವೃದ್ಧಿಗಾಗಿ ಹಾಗೂ ಬಡವರ ದೀನ ದಲಿತರ ಸಬಲೀಕರಣಕ್ಕಾಗಿ ದುಡಿಯಬೇಕು. ಇದು ಶಾಂತಿ, ಐಕ್ಯತೆ ಮತ್ತು ಸಹೋದರತ್ವವನ್ನು ಕಾಪಾಡಿಕೊಳ್ಳುವಂತಹ ಸಮಯ. ಸುಳ್ಳು ವದಂತಿಗಳಿಂದ ದೂರವಿರಿ" ಎಂದು ತಿಳಿಸಿದ್ದಾರೆ.