ತಮಿಳುನಾಡು, ಡಿ 17 (Daijiworld News/MB) : ಅತ್ತೆ ಸೊಸೆ ನಡುವೆ ಜಗಳ ಸಾಮಾನ್ಯ. ಆದರೆ ಇಲ್ಲೊಬ್ಬಳು ಸೊಸೆ ಜಗಳದಲ್ಲಿ ನಡು ರಸ್ತೆಯಲ್ಲೇ ಅತ್ತೆಗೆ ಕಚ್ಚಿದ್ದಾಳೆ. ಇದರ ಪರಿಣಾಮ 6 ಹೊಲಿಗೆ ಹಾಕ ಬೇಕಾದಂತ ಪರಿಸ್ಥಿತಿ ಉಂಟಾದ ಘಟನೆ ಪೊಲ್ಲಾಚಿಯಲ್ಲಿ ನಡೆದಿದೆ.
ಅತ್ತೆ ನಾಗೇಶ್ವರಿ (62) ಉದುಮಲೈ ರಸ್ತೆಯ ಇ-ಪಟ್ಟಣದ ನಿವಾಸಿ. ಆಕೆಯ ಏಕೈಕ ಪುತ್ರ ಸರವಣಕುಮಾರ್ (38) ಬಾಂಡ್ ಗುಮಾಸ್ತನಾಗಿದ್ದು ಶಾಶ್ವತವಾದ ಕೆಲಸವಿರುತ್ತಿರಲಿಲ್ಲ. ಆದರೆ ಈ ಸಿಕ್ಕ ಹಣದಲ್ಲೂ ಮದ್ಯಪಾನ ಮಾಡುತ್ತಿದ್ದ.
ಸುಮಾರು 13 ವರ್ಷಗಳ ಹಿಂದೆ ಚಿನ್ನಂ ಬಾಲಾಯಂ ಮೂಲದ ಕಲ್ಪನಾ ಎಂಬವಳನ್ನು ಆತ ವಿವಾಹವಾಗಿದ್ದು ದಿನ ಮದ್ಯಪಾನ ಮಾಡುವ ವಿಚಾರದಲ್ಲಿ ಇವರ ನಡುವೆ ಜಗಳವಾಗುತ್ತಿತ್ತು.
ಸರವಣಕುಮಾರ್ ತನ್ನ ತಾಯಿಯ ಮನೆಯಲ್ಲೆ ಇದ್ದು ಈ ವಿಚಾರದಲ್ಲಿ ಅತ್ತೆ ಸೊಸೆಯ ನಡುವೆ ಜಗಳ ನಡೆಯುತ್ತಲ್ಲೇ ಇತ್ತು. ಆದರೆ ಶನಿವಾರ ನಡು ರಸ್ತೆಯಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು ಸೊಸೆ ಅತ್ತೆಯ ತಲೆಗೆ ಕಚ್ಚಿದ್ದು ಆಕೆಗೆ 6 ಹೊಲಿಗೆ ಹಾಕುವಷ್ಟು ದೊಡ್ಡ ಗಾಯವಾಗಿದೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಕುರಿತು ಅತ್ತೆ ನಾಗೇಶ್ವರಿ ಮಹಾಲಿಂಗಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಈ ದೂರನ್ನು ಹಿಂದಕ್ಕೆ ಪಡೆಯುವಂತೆ ಸೊಸೆ ಬೆದರಿಕೆ ಹಾಕುತ್ತಿದ್ದಾಳೆ ಎಂದು ತಿಳಿಸಿದ್ದು ಪೊಲೀಸರು ಸೊಸೆಯನ್ನು ಬಂಧಿಸಿದ್ದಾರೆ.
ಈ ನಡುವೆ ಅತ್ತೆ ಒಂದು ವರ್ಷಗಳ ಹಿಂದೆ ಸೊಸೆಯ ಮೇಲೆ ಹಲ್ಲೆ ಮಾಡಿದ್ದಳು ಎಂಬ ಆರೋಪವನ್ನು ಮಾಡಲಾಗಿದೆ.