ಬೆಂಗಳೂರು, ಡಿ 17 (Daijiworld News/MB) : ಮೋದಿ ಸರಕಾರ ವಿದ್ಯಾರ್ಥಿ, ಯುವಜನ ಹಾಗೂ ಪತ್ರಕರ್ತರ ಮೇಲೆ ಹಲ್ಲೆ ಮಾಡುತ್ತಿದೆ, ಜನರ ಧ್ವನಿಗೆ ಭಯ ಪಡುತ್ತದೆ ಎಂದು ಪ್ರಿಯಾಂಕ ಗಾಂಧಿ ಟ್ಟೀಟ್ ಮಾಡಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಕರ್ನಾಟಕ "ಜನರಿಗೆ ಮೋಸ ಮಾಡಲು ಗಾಂಧಿ ಹೆಸರು ಬಳಸುವವರು ಹೇಡಿಗಳು" ಎಂದು ಟ್ವೀಟ್ ಮಾಡಿದ್ದಾರೆ.
"ತಮ್ಮ ಆಡಳಿತವಾಧಿಯಲ್ಲಿ ಮುಗ್ಧ ಸಿಖ್ಖರ ಮೇಲೆ ಗೂಂಡಾಗಳನ್ನು ಬಿಟ್ಟು ಅವರಿಗೆ ಹಲ್ಲೆ ನಡೆಸಿದ ವ್ಯಕ್ತಿ ಓರ್ವ ಹೇಡಿ. ದೇಶವನ್ನು ಲೂಟಿ ಮಾಡುವ ಸಲುವಾಗಿ ಕೈ ಬೊಂಬೆಯಾಗಿರು ವ್ಯಕ್ತಿಯನ್ನು ದೇಶದ ಪ್ರಧಾನಿ ಮಾಡಲು ಮುಂದಾಗುವ ವಂಚಕರು ಹೇಡಿಗಳು. ಹಾಗಾದರೆ ಹೇಡಿಗಳು ಯಾರು ಎಂದು ಲೆಕ್ಕಾಚಾರ ಹಾಕಿ"ಎಂದು ಹೇಳಿದ್ದಾರೆ.
"ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ ಸಂದರ್ಭದಲ್ಲಿ ಸರಕಾರ ಜನರ ಮಾತನ್ನು ಕೇಳಬೇಕು. ಆದರೆ ಈ ಬಿಜೆಪಿ ಸರಕಾರ ಈಶಾನ್ಯ ರಾಜ್ಯ, ಉತ್ತರ ಪ್ರದೇಶ ಮತ್ತು ದೆಹಲಿಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಸರಕಾರ ಜನರ ಧ್ವನಿಗೆ ಭಯ ಪಡುತ್ತದೆ" ಎಂದು ದೂರಿದ್ದಾರೆ.