ಮುಂಬೈ, ಡಿ 18(Daijiworld News/MB) : ಮಹಿಳೆಗೆ ವಿಡಿಯೋ ಕರೆ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯು ಕಂಡಿವಳಿಯ ಸಾಮ್ತ ನಗರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದು ಈ ಬ್ಯೂಟಿ ಪಾರ್ಲರ್ನ ಪ್ರಚಾರದ ಸಲುವಾಗಿ ತಯಾರಿಸಿದ್ದ ಕರಪತ್ರದಲ್ಲಿ ಆಕೆಯ ಫೋನ್ ನಂಬರ್ಅನ್ನು ನಮೂದಿಸಿದ್ದು ಈ ಪತ್ರದಲ್ಲಿದ್ದ ನಂಬರ್ಗೆ ವಾಟ್ಸ್ ಆಪ್ ಮೂಲಕ ಕರೆ ಮಾಡಿದ ಆರೋಪಿ ಆಕೆಗೆ ದೇಹದ ಖಾಸಗಿ ಭಾಗಗಳನ್ನು ತೋರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಯನ್ನು ಬಂಧಿಸಿದ ಪೊಲೀಸರಿಗೆ ಆತ ಈ ಹಿಂದೆಯು ಲೈಂಗಿಕ ಕಿರುಕುಳ ನೀಡಿದ ಅಪರಾಧಿಯಾಗಿದ್ದ ಎಂದು ತಿಳಿದುಬಂದಿದೆ.
ಆತನು ಇತ್ತೀಚೆಗೆ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧದಲ್ಲಿ 3 ವರ್ಷಗಳ ಜೈಲು ವಾಸ ಮುಗಿಸಿ ಬಿಡುಗಡೆಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.