ನವದೆಹಲಿ, ಡಿ 18 (Daijiworld News/MSP): ನಿರ್ಭಯ ಅತ್ಯಾಚಾರ, ಹತ್ಯೆ ಪ್ರಕರಣದ ಅಪರಾಧಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
2012ರ ಡಿಸೆಂಬರ್ 16ರಂದು 23 ವರ್ಷದ ಯುವತಿ ನಿರ್ಭಯಾಳ ಮೇಲೆ ಆರು ಮಂದಿ ಚಲಿಸುತ್ತಿರುವ ಬಸ್ಸಿನಲ್ಲಿ ಅತ್ಯಾಚಾರವೆಸಗಿ ನಂತರ ಭೀಕರವಾಗಿ ಹತ್ಯೆಗೈದ್ದರು. ಅಕ್ಷಯ್ ಪರ ವಕೀಲರು ಕೇವಲ 21 ನಿಮಿಷಗಳಲ್ಲಿ ಎಲ್ಲಾ 6 ಮಂದಿ ಬಸ್ಸಿನಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಲು ಸಾಧ್ಯವಿಲ್ಲ ಎಂದು ಆರೋಪಿ ಪರ ವಾದ ಮಂಡಿಸುವಾಗ ಹೇಳಿ.ತಿಹಾರ್ ಜೈಲಿನ ನಿವೃತ್ತ ಅಧಿಕಾರಿಯ ಆದೇಶವನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
ಅರ್ಜಿಯನ್ನು ನಿರಾಕರಿಸುವಂತೆ ಒತ್ತಾಯಿಸಿದ ನಿರ್ಭಯಾ ಪೋಷಕರ ಪರ ವಕೀಲರು, ನಿರ್ಭಯಾ ಕೊಲೆ ಆರೋಪಿಗಳಿಗೆ ಸರಿಯಾದ ಶಿಕ್ಷೆ ನೀಡಿ ನ್ಯಾಯ ಒದಗಿಸದಿದ್ದರೆ ದೇವರು ಸುಮ್ಮನೆ ಬಿಡುವುದಿಲ್ಲ. ಅವರಿಗೆ ಯಾವುದೇ ಕಾರಣಕ್ಕೂ ಜೀವದಾನ ನೀಡಬಾರದು ಎಂದು ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
ಸುಪ್ರೀ ಕೋರ್ಟ್ ನಿಂದ ತೀರ್ಪು ಹೊರಬೀಳುತ್ತಿದ್ದಂತೆ ಪ್ರತಿಕ್ರಿಯಿಸಿದ ನಿರ್ಭಯಾ ತಾಯಿ, ನ್ಯಾಯಾಲಯದ ತೀರ್ಪಿನಿಂದ ನನಗೆ ಸಂತಸ ತಂದಿದೆ ಎಂದಿದ್ದಾರೆ.