ಬೆಂಗಳೂರು, ಡಿ 18 (Daijiworld News/PY) : ಕೇಂದ್ರ ಸರ್ಕಾರ ಜಾರಿಗೊಳಿಸಿದ ನೂತನ "ಪೌರತ್ವ ಕಾಯ್ದೆಯಿಂದಾಗಿ ರಾಜ್ಯ ಹೊತ್ತಿ ಉರಿಯುತ್ತಿದೆ" ಎಂದು ಹೇಳಿದ ಯು ಟಿ ಖಾದರ್ ನ ಹೇಳಿಕೆಗೆ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ತಿರುಗೇಟು ನೀಡಿದ್ದಾರೆ.
ಪ್ರವಾಸೋದ್ಯಮದ ನೀತಿ ರೂಪಿಸುವ ಸಲುವಾಗಿ ಬೆಂಗಳೂರಿನಲ್ಲಿ ಆಯೋಜಿಸಲಾದ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮದ ಉದ್ಘಾಟನೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, "ಪೌರತ್ವ ನೀಡಿರುವುದು ಬಾಂಗ್ಲಾದೇಶ ಪಾಕಿಸ್ತಾನದ ನಿರಾಶ್ರಿತ ಹಿಂದೂಗಳಿಗೆ ಹೊರತು ಖಾದರ್ ನ ಪಾಕ್ ಸಂಬಂಧಿಗಳಿಗೆ ನೀಡಲಾಗದು" ಎಂದು ಹೇಳಿದ್ದಾರೆ.
ಕಾಂಗ್ರೇಸ್ ವಿರುದ್ಧ ಕಿಡಿಕಾರಿದ ಸಿ ಟಿ ರವಿ, ಬೆಂಕಿ ಹಚ್ಚುವ ಕಾರ್ಯದಲ್ಲಿ ಕಾಂಗ್ರೇಸ್ಸಿಗರೇ. ಮುಂದಿದ್ದಾರೆ, ಗೋಧ್ರಾದಲ್ಲಿ ಕರಸೇವಕರಿದ್ದ ರೈಲಿನ ಬೋಗಿಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದು ಕಾಂಗ್ರೇಸ್ಸಿಗರೇ. ಒಂದು ವೇಳೆ ಹಿಂದೂಗಳು ಎದುರಾಗಿ ನಿಂತರೆ ನೀವೇನು ಮಾಡಲು ಸಾದ್ಯ ಎನ್ನುವುದಕ್ಕೆ ಗುಜರಾತ್ ನಲ್ಲಿನ ಉದಾಹರಣೆ ಸಾಕು. ಹೀಗಾಗಿ, ಈ ವಿಚಾರದ ಕುರಿತು ಖಾದರ್ ಅರಿತು ಮಾತನಾಡಲಿ ಎಂದರು.