ನವದೆಹಲಿ, ಡಿ 19 (Daijiworld News/MB): ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೆಹಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ ಇನ್ನೂ ಮುಂದುವರೆದಿದ್ದು ತೀವ್ರ ಪ್ರತಿಭಟನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ಸೆಕ್ಷನ್ 144 ಜಾರಿ ಮಾಡಿರುವುದು ಮಾತ್ರವಲ್ಲದೇ ಪ್ರಮುಖವಾದ 13 ಮೆಟ್ರೋ ನಿಲ್ದಾಣಗಳನ್ನು ಸ್ಥಗಿತ ಮಾಡಲಾಗಿದೆ.
ದೆಹಲಿಯೂ ಹೆಚ್ಚು ವಾಹನ ಓಡಾಡುವ ಸ್ಥಳವಾದ್ದರಿಂದ ಹೆಚ್ಚಿನ ಜನರು ಮೆಟ್ರೋ ಸಂಚಾರವನ್ನೇ ಅಲಂಬಿಸಿದ್ದಾರೆ. ಆದರೆ ಇಂದು 13 ಪ್ರಮುಖ ಮೆಟ್ರೋ ನಿಲ್ದಾಣಗಳು ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ಜನರು ಟ್ರಾಫಿಕ್ ಸಮಸ್ಯೆಯನ್ನು ಅನುಭವಿಸ ಬೇಕಾದಂತ ಪರಿಸ್ಥಿತಿ ಉಂಟಾಗಿದೆ.
ಈಶಾನ್ಯ ಭಾರತ ದೆಹಲಿ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿ ಆರಂಭವಾದ ಈ ಪ್ರತಿಭಟನೆ ಈಗ ದೇಶದೆಲ್ಲೆಡೆಗೆ ಹಬ್ಬಿದ್ದು ದಕ್ಷಿಣ ಭಾರತದಲ್ಲೂ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಹಲವು ಕಡೆ ನಿಷೇದಾಜ್ಞೆ ಜಾರಿ ಮಾಡಲಾಗಿದೆ.