ನವದೆಹಲಿ, ಡಿ 19 (Daijiworld News/MB): 23 ವರ್ಷದ ಗಗನ ಸಖಿ ತನ್ನ ಪಿಜಿ ರೂಮ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಗುರುಗ್ರಾಮದಲ್ಲಿ ಬುಧವಾರ ನಡೆದಿದೆ.
ಮೃತ ಯುವತಿ ಮಿಸ್ತು ಸರ್ಕಾರ್ ಶ್ಚಿಮ ಬಂಗಾಳದ ಸಿಲಿಗುರಿ ಮೂಲದವಾಳಗಿದ್ದು ದೆಹಲಿಯಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಗಗನಸಖಿಯಾಗಿ ಕಾರ್ಯ ನಿರ್ವಹಿಸುತ್ತಿದಳು.
"ಪಿಜಿ ಮಾಲಕನ ದೌರ್ಜನ್ಯದಿಂದ ಮಗಳು ಮನನೊಂದಿದ್ದಳು. ಆಕೆ ನನಗೆ ಮಂಗಳವಾರ ಕರೆ ಮಾಡಿದ್ದು ಪಿಜಿ ಮಾಲಕ ನಿರಂತರವಾಗಿ ಅವಳ ಮೇಲೆ ದೌರ್ಜನ್ಯ ನಡೆಸುತ್ತಿರುವುದಾಗಿ ತಿಳಿಸಿದ್ದಳು. ಆ ದಿನವೂ ಆಕೆ ಕೆಲಸ ಮುಗಿಸಿ ರಾತ್ರಿ ಪಿಜಿಗೆ ಹಿಂದಿರುಗಿ ಬಂದಾಗ ಮಾಲಿಕನು ಆಕೆಗೆ ಅವಮಾನ ಮಾಡಿದ್ದ. ಅವಳು ನನಗೆ ಕರೆ ಮಾಡಿ ಪಿಜಿ ಮಾಲಕ ನನ್ನ ಮೊಬೈಲ್ನ್ನು ಹ್ಯಾಕ್ ಮಾಡಿದ್ದು ನನ್ನನ್ನು ಹೊರಗೆ ಹೋಗಲು ಬಿಡುತ್ತಿಲ್ಲ ಎಂದು ಹೇಳಿ ಅಳುತ್ತಿದ್ದಳು" ಎಂದು ಪೊಲೀಸರಿಗೆ ಮಿಸ್ತು ತಂದೆ ಎಚ್.ಸಿ.ಸರ್ಕಾರ್ ಹೇಳಿದ್ದಾರೆ.
ಹಾಗೆಯೇ "ಆಕೆ ಮನೆಗೆ ಬರಲು ಬಯಸುತ್ತಿದ್ದಳು. ಆಕೆ ಕರೆ ಮಾಡಿದ ಸ್ವಲ್ಪ ಸಮಯದ ನಂತರ ಮಿಸ್ತು ಏನೋ ಮಾಡಿಕೊಂಡಿದ್ದಾಳೆ ಎಂದು ಪಿಜಿ ಮಾಲಕ ಕರೆ ಮಾಡಿ ಹೇಳಿದ್ದ ನಾನು ಅವಳಿಗೆ ಏನಾಯಿತು? ಎಂದು ಕೇಳಿದಾಗ ಆತ ಉತ್ತರಿಸಲಿಲ್ಲ. ತಕ್ಷಣ ನಾನು ಗುರುಗ್ರಾಮ ಪೊಲೀಸರಿಗೆ ಕರೆ ಮಾಡಿ ಆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲು ಹೇಳಿದೆ" ಎಂದು ತಿಳಿಸಿದ್ದಾರೆ.
"ಪೊಲೀಸರು ಸ್ಥಳಕ್ಕೆ ಹೋದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ. ಪಿಜಿ ಮಾಲಕ ಆಕೆಗೆ ಏನೋ ಮಾಡಿದ್ದಾನೆ. ಆಕೆ ಆತನ ದೌರ್ಜನ್ಯದಿಂದಾಗಿ ನೊಂದಿದ್ದಳು. ಆದರೆ ಆಕೆ ನನಗೆ ಕರೆ ಮಾಡಿದಾಗ ಆಕೆ ಆತ್ಮಹತ್ಯೆ ಮಾಡುವಂತಹ ನಿರ್ಧಾರ ಮಾಡುವವಳಲ್ಲ ಎಂದು ನನಗೆ ತಿಳಿದಿದೆ" ಎಂದು ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ತನಿಖಾಧಿಕಾರಿ ರಾಂಮ್ ನಿವಾಸ್ "ನಮಗೆ ಆಕೆಯ ಕೋಣೆಯಲ್ಲಿ ಯಾವುದೆ ಡೆತ್ ನೋಟ್ ಸಿಕ್ಕಿಲ್ಲ. ಸ್ಥಳಕ್ಕೆ ವಿಧಿವಿಜ್ಞಾನ ತಂಡ ಹೋಗಿ ಪರಿಶೀಲನೆ ನಡೆಸಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುವುದು" ಎಂದು ಹೇಳಿದ್ದಾರೆ.