ನವದೆಹಲಿ, ಡಿ 20 (Daijiworld News/MSP): ಉನ್ನಾವ್ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ತೀರ್ಪು ಹೊರಬಿದ್ದಿದೆ. ದೆಹಲಿಯ ತೀಸ್ ಹಜಾರಿ ನ್ಯಾಯಾಲಯವೂ ಬಿಜೆಪಿಯ ಉಚ್ಚಾಟಿತ ಶಾಸಕ ಕುಲದೀಪ್ ಸೆಂಗರ್ ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆಯಾಗೆ ಗುರಿಪಡಿಸಲಾಗಿದೆ. ಮಾತ್ರವಲ್ಲದೇ ಕುಲದೀಪ್ ಸೆಂಗರ್ ಗೆ 25 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
2017ರಲ್ಲಿ ಅಪ್ರಾಪ್ತೆಯೊಬ್ಬಳನ್ನು ಅಪಹರಿಸಿ ಬರ್ಬರವಾಗಿ ಎಸಗಿದ್ದ ಅತ್ಯಾಚಾರ ಪ್ರಕರಣ ದೇಶವ್ಯಾಪ್ತಿ ಚರ್ಚೆಗೆ ಗುರಿಯಾಗಿತ್ತು. ಪ್ರಕರಣದಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ಪ್ರಮುಖ ಆರೋಪಿಯನ್ನಾಗಿಸಿ ್ ಫೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು ಆ ಬಳಿಕ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿತ್ತು. ಇದೀಗ ತೀರ್ಪು ಹೊರಬಿದ್ದಿದ್ದು, ನ್ಯಾಯಾಧೀಶ ಧರ್ಮೇಶ್ ಶರ್ಮಾ ಅವರು ಸೆಂಗರ್ ಮಾಡಿದ ಅಪರಾಧ ಸಾಬೀತಾಗಿತ್ತು, ಜೀವಾವಧಿ ಶಿಕ್ಷೆ ಘೋಷಿಸಿದ್ದಾರೆ.
ದುರಂತವೆಂದರೆ ಸಂತ್ರಸ್ತ ಯುವತಿ ಸಾಕ್ಷಿ ಹೇಳಲು ಕೋರ್ಟ್ ಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ನಡುರಸ್ತೆಯಲ್ಲೇ ಆಕೆಯನ್ನು ಸಜೀವವಾಗಿ ದುಷ್ಕರ್ಮಿಗಳು ದಹಿಸಿದ್ದರು.