ಮುಂಬೈ, ಡಿ 21 (Daijiworld News/PY) : ಮುಂಬೈ ಮಹಾನಗರ ಪಾಲಿಕೆಯು ನಗರದ ಜನತೆಗೆ ಹಾಗೂ ತನ್ನ ನೌಕರರಿಗೆ 10 ರೂ ಗೆ ಭರ್ಜರಿಯಾಗಿ ಊಟ ನೀಡುವ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಮೇಯರ್ ಕಿಶೋರಿ ಫೆಡ್ನೆಕರ್ ತಿಳಿಸಿದ್ದಾರೆ.
ಮುಂಬೈ ಮಹಾನಗರ ಪಾಲಿಕೆ ಮೇಯರ್ ಕಿಶೋರಿ ಫೆಡ್ನೆಕರ್ ಈ ಯೋಜನೆಯನ್ನು ಉದ್ಘಾಟನೆ ಮಾಡಿದ್ದು, ಈ ಯೋಜನೆಯಲ್ಲಿ 10 ರೂ ಗಳಿಗೆ ಎರಡು ಚಪಾತಿ, ಅನ್ನ, ದಾಲ್, 2 ರೀತಿಯ ತರಕಾರಿಯ ಖಾದ್ಯಗಳು ದೊರಕಲಿವೆ. ಈ ಯೋಜನೆಯ ಕುರುತಾಗಿ ಶಿವಸೇನೆ ತನ್ನ ಪ್ರನಾಳಿಕೆಯಲ್ಲಿ ಡಿ.19ರಂದು ಜಾರಿಗೊಳಿಸುವುದಾಗಿ ಘೋಷಿಸಿತ್ತು. ಅಲ್ಲದೇ ಈ ಯೋಜನೆಯನ್ನು ನಗರದ ನಾಗರಿಕರಿಗೂ ವಿಸ್ತರಿಸಬೇಕೆಂದು ತಿಳಿಸಿದ್ದಾರೆ.
ಈ ಯೋಜನೆ ಜಾರಿಗೊಳ್ಳಲಿದೆ ಎಂಬ ವಿಷಯವನ್ನು ತಿಳಿದ ಎರಡು ದಿನದಲ್ಲಿ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿಂದೆಯೇ ಘೊಷಿಸಲಾದ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿಯ ಸಾಮಾನ್ಯ ಪ್ರನಾಳಿಕೆಯ ಯೋಜ ಇದಾಗಿದ್ದು, ಈ ಯೋಜನೆಯನ್ನು ಕೇವಲ ನೌಕರರಿಗೆ ನೀಡುವ ಜೊತೆಗೆ ಎಲ್ಲಾ ಜನರಿಗೂ ಇದನ್ನು ವಿಸ್ತರಿಸಬೇಕು ಎಂದು ಕ್ಯಾಂಟೀನ್ ಮಾಲೀಕರು ತಿಳಿಸಿದ್ದಾರೆ.