ತಿರುವನಂತಪುರ, ಡಿ 22 (Daijiworld News/PY) : 30 ವರ್ಷಗಳ ಹಿಂದೆ ತನ್ನ ಪುಸ್ತಕವೊಂದರಲ್ಲಿ ಹಿಂದೂ ನಾಯರ್ ಮಹಿಳೆಯನ್ನು ಅವಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ದ ದಾಖಲಾದ ಪ್ರಕರಣದ ಹಿನ್ನೆಲೆ ಕೇರಳ ನ್ಯಾಯಾಲಯವು ಶಶಿ ತರೂರ್ ಅವರನ್ನು ಬಂಧನ ಮಾಡುವಂತೆ ವಾರಂಟ್ ಹೊರಡಿಸಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಶನಿವಾರ ವಕೀಲರೊಂದಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸ್ಥಳೀಯ ಕೋರ್ಟ್ ಆದೇಶಿಸಿತ್ತು, ಆದರೆ, ನ್ಯಾಯಾಲಯಕ್ಕೆ ಹಾಜರಾಗದ ಶಶಿ ತರೂರ್ ಅವರನ್ನು ಬಂಧನ ಮಾಡುವಂತೆ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ವಾರಂಟ್ ಹೊರಡಿಸಿದ್ದಾರೆ.
ಸಮನ್ಸ್ ಜಾರಿಮಾಡಿದ್ದರೂ ಸಹ ವಿಚಾರಣೆಗೆ ಹಾಜರಾಗದೆ ಹಾಗೂ ತಮ್ಮ ವಕೀಲರನ್ನೂ ಕೋರ್ಟ್ಗೆ ಕಳುಹಿಸದ ಕಾರಣ ಈ ವಾರಂಟ್ ಜಾರಿ ಆಗಿದೆ, ಎಂದು ತಿಳಿದುಬಂದಿದೆ.