ಜಾರ್ಖಂಡ್,ಡಿ 23 (Daijiworld News/MB) : ಜಾರ್ಖಂಡ್ ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಸೋಮವಾರ ಪ್ರಕಟವಾಗಲಿದ್ದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿದೆ.
ಜಾರ್ಖಂಡ್ ನ ಒಟ್ಟು 81 ಸ್ಥಾನಗಳಿಗೆ ಐದು ಹಂತಗಳಲ್ಲಿ ನವೆಂಬರ್ 30ರಿಂದ ಡಿಸೆಂಬರ್ 20ರವರೆಗೆ ಮತದಾನ ನಡೆದಿತ್ತು.
ರಾಜ್ಯದಲ್ಲಿ ಪ್ರಮುಖವಾಗಿ ಬಿಜೆಪಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ನೇತೃತ್ವದ ವಿರೋಧ ಮೈತ್ರಿಕೂಟಗಳು ಪೈಪೋಟಿಯಲ್ಲಿದ್ದು, ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 37 ಸೀಟುಗಳನ್ನು ಗೆದ್ದುಕೊಂಡಿದ್ದ ಬಿಜೆಪಿ ಈ ಬಾರಿ 65 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಚುನಾವಣಾ ಘೋಷಣೆಗಳಲ್ಲಿ ಹೇಳುತ್ತಾ ಬಂದಿದೆ. ಆದರೆ ಈ ಬಾರಿ ಜೆಎಂಎಂ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ(ಆರ್ ಜೆಡಿ) ಮೈತ್ರಿಕೂಟಗಳಿಂದ ಭಾರೀ ಪೈಪೋಟಿ ಎದುರಿಸಲಿದೆ.
ಕಳೆದ ಬಾರಿ 2014ರಲ್ಲಿ ಎಜೆಎಸ್ ಯು ನೆರವಿನೊಂದಿಗೆ ಬಿಜೆಪಿಯ ರಘುವೀರ್ ದಾಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಈ ಬಾರಿ ಎಜೆಎಸ್ ಯು ಬಿಜೆಪಿಯಿಂದ ಹೊರಬಂದು ಏಕಾಂಗಿಯಾಗಿ ಸ್ಪರ್ಧಿಸಿದೆ.