ತೆಲಂಗಾಣ, ಡಿ 23(Daijiworld News/MSP): ವೈದ್ಯರ ಎಡವಟ್ಟಿನಿಂದ ಹೆರಿಗೆ ವೇಳೆ ನವಜಾತ ಶಿಶುವಿನ ರುಂಡ-ಮುಂಡ ಬೇರ್ಪಟ್ಟು ಹೆರಿಗೆ ವೇಳೆ ಮಹಿಳೆಯೊಬ್ಬಳು ಆಸ್ಪತ್ರೆಯಲ್ಲಿ ಜೀವನ್ಮರಣದಿಂದ ಹೋರಾಡಿದ ವಿಲಕ್ಷಣ ಘಟನೆ ತೆಲಂಗಾಣದ ಅಚಮಪೇಟ್ ಆಸ್ಪತ್ರೆಯಲ್ಲಿ ನಡೆದಿದೆ.
ಸ್ವಾತಿ ಹೆಸರಿನ 23 ವರ್ಷದ ಮಹಿಳೆ ಹೆರಿಗೆಗಾಗಿ ಅಚಮಪೇಟ್ ಆಸ್ಪತ್ರೆಗೆ ಬಂದಿದ್ದಳು. ಡಿಸೆಂಬರ್ 18ರಂದು ಆಸ್ಪತ್ರೆಗೆ ದಾಖಲಾಗಿದ್ದಳು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಸಾಮಾನ್ಯ ಹೆರಿಗೆಯಾಗುತ್ತದೆ. ಆದರೆ ಬಳಿಕ ಕರ್ತವ್ಯನಿರತ ವೈದ್ಯೆ ಡಾ.ಸುಧಾ ರಾಣಿ ಎಂಬವರು ಹೆರಿಗೆಗಾಗಿ ಸಿಸರೀಯೆನ್ ಆದರೆ ಈ ವೇಳೆ ಮಗುವಿನ ತಲೆ ದೇಹದಿಂದ ಕತ್ತರಿಸಲ್ಪಟ್ಟಿತು. ಭಯಭೀತರಾದ ವೈದ್ಯರು ಅದನ್ನು ಮತ್ತೆ ಗರ್ಭದಲ್ಲಿ ಇರಿಸಲು ಪ್ರಯತ್ನಿಸಿದರೂ ಸಾಧ್ಯವಾಗದೇ ಭ್ರೂಣದ ತಲೆಯನ್ನು ತೆಗೆದು ದೇಹವನ್ನು ತಾಯಿಯ ಗರ್ಭದೊಳಗೆ ಬಿಟ್ಟು ಹೊಲಿಗೆ ಹಾಕಿ, ಸ್ವಾತಿ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿದೆ ಇಲ್ಲಿ ಸೂಕ್ತ ಸೌಲಭ್ಯಗಳಿಲ್ಲದ ಕಾರಣ ಹೈದ್ರಾಬಾದ್ ಆಸ್ಪತ್ರೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.
ಸ್ವಾತಿಯನ್ನು ಹೈದ್ರಾಬಾದ್ ಪೆಟ್ಲಾಬುರ್ಜ್ನ ಹೆರಿಗೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪರೀಕ್ಷೆ ನಡೆಸಿದಾಗ ವೈದ್ಯರು ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಸಂದರ್ಭ ಗರ್ಭದೊಳಗೆ ರುಂಡವಿಲ್ಲ ಭ್ರೂಣದ ದೇಹವನ್ನು ಕಂಡು ತಕ್ಷಣ ಸಂಬಂಧಿಕರ ಗಮನಕ್ಕೆ ತಂದಿದ್ದಾರೆ.
ಈ ವೇಳೆ ಮಹಿಳೆಯ ಸಂಬಂಧಿಕರು ಶುಕ್ರವಾರ ಅಚಾಂಪೆಟ್ ಆಸ್ಪತ್ರೆಯ ಕಿಟಕಿ ಗಾಜು ಪುಡಿಗೈದು ಗಲಾಟೆ ಮಾಡಿದ್ದಾರೆ. ಜೊತೆಗೆ ಮೃತ ಮಗುವಿನ ಶಿರಯನ್ನು ಅವರಿಗೆ ಹಸ್ತಾಂತರಿಸುವಂತೆ ಒತ್ತಾಯಿಸಿದಾಗ ವೈದ್ಯೆ ನಿರಾಕರಿಸಿದ್ದಾರೆ.
ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿತ್ತಿದ್ದಂತೆ ಜಿಲ್ಲಾಧಿಕಾರಿ ಇ ಶ್ರೀಧರ್ ಮತ್ತು ಡಿಎಂಹೆಚ್ಒ ಕೆ ಸುಧಾಕರ್ ಲಾಲ್ ಆಸ್ಪತ್ರೆಗೆ ಧಾವಿಸಿದ್ದು, ಬೇಜವಾಬ್ದಾರಿಯಿಂದ ವರ್ತಿಸಿದ ಡಾ. ಸುಧಾ ರಾಣಿ ವಿರುದ್ಧ ಪ್ರಾಥಮಿಕ ಸಾಕ್ಷ್ಯಾಧಾರಗಳು ಲಭ್ಯವಾದ ಹಿನ್ನಲೆಯಲ್ಲಿ ಡಾ. ಸುಧಾ ಮತ್ತು ಆಸ್ಪತ್ರೆಯ ಅಧೀಕ್ಷಕ ತಾರಾ ಸಿಂಗ್ ಅವರನ್ನು ಅಮಾನತುಗೊಳಿಸಿದ್ದಾರೆ.