ಬೆಂಗಳೂರು, ಡಿ 24 (Daijiworld News/MB) : ಪೌರತ್ವ ತಿದ್ದುಪತಿ ಕಾಯ್ದೆ ಮತ್ತು ರಾಷ್ಟ್ರೀಯ ನೋಂದಣಿ ಕಾಯ್ದೆ ಜಾರಿ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ವೇಳೆ ಗೋಲಿಬಾರ್ ನಲ್ಲಿ ಇಬ್ಬರು ಬಲಿಯಾದ ಪ್ರಕರಣವನ್ನು ಸಿಐಡಿ ಹಾಗೂ ಮ್ಯಾಜಿಸ್ಟ್ರೀಯಲ್ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಹೇಳಿದ್ದಾರೆ.
ಗೋಲಿಬಾರ್, ಇಬ್ಬರ ಸಾವಿನ ಪ್ರಕರಣಗಳ ಕುರಿತ ವಿಚಾರಣೆ (ಮಾಜಿಸ್ಟೀರಿಯಲ್) ನೆಡೆಸಲು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರನ್ನು ಕಾರ್ಯಾಕಾರಿ ದಂಡಾಧಿಕಾರಿಯಾಗಿ ನೇಮಿಸಲಾಗಿದ್ದು, ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಆದೇಶ ಮಾಡಲಾಗಿದೆ.