ಬೆಂಗಳೂರು, ಡಿ 24 (Daijiworld News/MB) : "ಬಿಜೆಪಿಯನ್ನು ಹಲವು ರಾಜ್ಯಗಳು ತಿರಸ್ಕಾರ ಮಾಡುತ್ತಿದೆ. ಜಾರ್ಖಾಂಡ್ ಜನತೆಯು ಬಿಜೆಪಿಯನ್ನು ತ್ಯಜಿಸಿ ಜೆಎಂಎಂ ಮೈತ್ರಿಕೂಟದ ಆಯ್ಕೆ ಮಾಡಿದೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬಿಜೆಪಿಯ ಅಧಿಕಾರವಿದ್ದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ, ಮಹಾರಾಷ್ಟ್ರ ಹಾಗೂ ಜಾರ್ಖಂಡ್ನಲ್ಲಿ ಬಿಜೆಪಿ ಅಧಿಕಾರವನ್ನು ಕಳೆದುಕೊಂಡಿರುವ ಕುರಿತು ಪ್ರದಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು "ಈ ದೇಶ ಕಾಂಗ್ರೆಸ್ ಮುಕ್ತವಾಗ ಬೇಕೆಂದು ಬಯಸಿದ್ದಾರೆ. ಆದರೆ ಜನರು ಬಿಜೆಪಿ ಮುಕ್ತ ಭಾರತ ಮಾಡಲು ಮುಂದಾಗಿದ್ದಾರೆ" ಎಂದು ತಿಳಿಸಿದ್ದಾರೆ.
"ಬಿಜೆಪಿಯನ್ನು ಕರ್ನಾಟಕದಲ್ಲೂ ಜನತೆ ತಿರಸ್ಕಾರ ಮಾಡಿದ್ದರು. ಅವರಿಗೆ ಬಹುಮತ ಇರಲಿಲ್ಲ. ಆದರೆ ಶಾಸಕರನ್ನು ಖರೀದಿ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ" ಎಂದು ದೂರಿದರು.