ದುರ್ಗಾಪುರ, ಡಿ 24 (Daijiworld News/MB) : ದಟ್ಟವಾಗಿ ಮಂಜು ಆವರಿಸಿದ ಪರಿಣಾಮವಾಗಿ ಚಾಲಕನಿಗೆ ಫ್ಲೈ ಓವರ್ನ ಎತ್ತರ ತಿಳಿಯಲಾಗದೆ ವಿಮಾನದ ಭಾಗವೊಂದನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಸೇತುವೆಯ ಕೆಳಗೆ ಸಿಲುಕಿಕೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಶುಕ್ರವಾರ ಪಶ್ಚಿಮ ಬಂಗಾಳದಲ್ಲಿ 10 ಡಿಗ್ರಿ ಸೆಲ್ಸಿಯಸ್ಗೆ ಇಳಿದ ತಾಪಮಾನದಿಂದಾಗಿ ದಟ್ಟವಾಗಿ ಮಂಜು ಆವರಿಸಿದ್ದು ಚಾಲಕರಿಗೆ ದಾರಿ ಸರಿಯಾಗಿ ಕಾಣದ ಪರಿಣಾಮದಿಂದಾಗಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.