ನವದೆಹಲಿ, ಡಿ 24(Daijiworld News/MSP): ಗುಪ್ತಚರ ಬ್ಯೂರೋ ಮೂಲಗಳ ಪ್ರಕಾರ, ಪಾಕಿಸ್ತಾನದ ಭಾರತ ವಿರೋಧಿ ಗುಪ್ತಚರ ಸಂಸ್ಥೆಗಳು ಭಾರತದ ಅಣೆಕಟ್ಟುಗಳು ಮತ್ತು ಜಲಾಶಯಗಳ ಕಂಪ್ಯೂಟರ್ ಡೇಟಾವನ್ನು ಹ್ಯಾಕ್ ಮಾಡಿರುವ ಸಾಧ್ಯತೆ ಇದ್ದು ಈ ಹಿನ್ನಲೆಯಲ್ಲಿ ಅಣೆಕಟ್ಟುಗಳ ಕಂಪ್ಯೂಟರ್ ಭದ್ರತೆಯನ್ನು ಮ್ನತ್ತಷ್ಟು ಬಲಪಡಿಸಲು ಕೇಂದ್ರ ಜಲ ವಿದ್ಯುತ್ ಸಚಿವಾಲಯವು ರಾಜ್ಯಗಳಿಗೆ ಸಲಹೆ ನೀಡಿದೆ.
ಗುಪ್ತಚರ ಬ್ಯೂರೋ ವರದಿಯ ಪ್ರಕಾರ, ಜಲಾಶಯಗಳ ಒಳ-ಹೊರ ಹರಿವಿನ ಸಾಮರ್ಥ್ಯದ ದತ್ತಾಂಶಗಳೂ ಸೇರಿದಂತೆ ಇನ್ನಿತರ ಮಾಹಿತಿಯನ್ನು ಪಾಕಿಸ್ತಾನ ಸಂಗ್ರಹಿಸಿರುವ ಸಾಧ್ಯತೆ ಇದೆ. ಈ ಮಾಹಿತಿಗಳು ಅಣೆಕಟ್ಟುಗಳು ಮತ್ತು ಜಲಾಶಯಗಳ ಸುರಕ್ಷತೆಗೆ ಸಂಬಂಧಪಟ್ಟದ್ದಾಗಿದೆ. ಅಣೆಕಟ್ಟುಗಳನ್ನು ನಿಯಂತ್ರಿಸುವ ಕಂಪ್ಯೂಟರ್ ವ್ಯವಸ್ಥೆಗಳ ಸುರಕ್ಷತೆಯನ್ನು ಪಾಕಿಸ್ತಾನಿ ಹ್ಯಾಕರ್ಗಳು ಹಾನಿಗೊಳಿಸಬಹುದು. ಇದು ಅಣೆಕಟ್ಟುಗಳಿಗೆ ಅಪಾಯ ತರುವ ಸುಚನೆ ಎಂದು ಹೇಳಲಾಗುತ್ತಿದೆ.
ಇನ್ನು ಬ್ಯೂರೋದ ಹೆಚ್ಚುವರಿ ನಿರ್ದೇಶಕರಾದ ಅಮಿತಾಭ್ ರಂಜನ್ ಅವರು ಸಚಿವಾಲಯಗಳ ಅಧಿಕಾರಿಗಳಿಗೆ ಈ ಸಂಬಂಧ ಪತ್ರ ಬರೆದಿದ್ದು ಅವರು ದೇಶದ ಅಣೆಕಟ್ಟುಗಳಿಗೆ ಪಾಕ್ ನಿಂದ ಬೆದರಿಕೆ ಇದೆ ಎನ್ನುವ ಕುರಿತು ಎಚ್ಚರಿಕೆ ನೀಡಿದ್ದು, ಈ ಕುರಿತು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.