ಬೆಂಗಳೂರು, ಡಿ 24 (Daijiworld News/MB) : ಮಂಗಳೂರಿನಲ್ಲಿನಡೆದ ಗಲಭೆ ಪೂರ್ವಯೋಜಿತ ಎಂಬುದು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಸ್ಪಷ್ಟವಾಗಿ ತಿಳಿದುಬಂದಿದೆ. ಕಾಶ್ಮೀರದಲ್ಲಿ ಪೊಲೀಸರ ಮೇಲೆ ದಾಳಿ ನಡೆಸುವ ರೀತಿಯಲ್ಲೇ ಮಂಗಳೂರಿನಲ್ಲಿ ಪೊಲೀಸರ ಮೇಲೆ ದಾಳೆ ನಡೆಸಿದ್ದಾರೆ. ಈ ಗಲಭೆಯ ಹಿಂದೆ ಹೊರಗಡೆಯಿಂದ ಬಂದ ಜನ ಹಾಗೂ ಕಾಂಗ್ರೆಸ್ ನ ಕೈವಾಡವಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಅವರು, "ಈ ಗಲಭೆ ನಡೆದ ಒಂದು ದಿನಕ್ಕೂ ಮುನ್ನ ಮಾಜಿ ಸಚಿವ ಯು.ಟಿ. ಖಾದರ್ ಅವರು ಬೆಂಕಿ ಹಾಕುತ್ತೇನೆ ಎಂದು ಹೇಳಿಕೆ ನೀಡಿದ್ದರು. ಹಾಗಾಗಿ ಅವರಿಗೆ ಗಲಭೆಯ ಕುರಿತು ಮೊದಲೇ ತಿಳಿದಿತ್ತು. ಈ ಗಲಭೆ ಪೂರ್ವಯೋಜಿಯ ಕೃತ್ಯ ಎನ್ನುವ ಅನುಮಾನ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.
ಎಸ್ ಡಿಪಿಐ, ಪಿಎಫ್ ಐ, ಕೆಎಫ್ ಡಿ, ಕಾಂಗ್ರೆಸ್ ಪಕ್ಷದವರು ದಾಂದಲೆ ನಡೆಸಿದವರಲ್ಲಿ ಇದ್ದಂತಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಉತ್ತರ ನೀಡಬೇಕು. ಕೆಎಫ್ ಡಿ, ಎಸ್ ಡಿಪಿಐ ನಿಷೇಧಿಸಬೇಕು ಎಂಬ ಒತ್ತಾಯವಿದೆ ಎಂದು ತಿಳಿಸಿದ್ದಾರೆ.