ನವದೆಹಲಿ, ಡಿ 24(Daijiworld News/MSP): ರಾಷ್ಟ್ರೀಯ ಪೌರತ್ವ ನೋಂದಣಿ ನಂತರ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್) ಮಾಹಿತಿ ಸಂಗ್ರಹ ಪರಿಷ್ಕೃತ ಪ್ರಸ್ತಾವಣೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ಸೂಚಿಸಿದೆ
ದೇಶದ ಪ್ರತಿಯೊಬ್ಬ ನಿವಾಸಿಯ ಗುರುತಿನ ಸಮಗ್ರ ಡಾಟಾ ಬೇಸ್ ನಿರ್ಮಿಸುವುದು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಉದ್ದೇಶವಾಗಿದೆ. ಕೇಂದ್ರದ ಗ್ರೀನ್ ಸಿಗ್ನಲ್ ಬಳಿಕ ಎನ್ ಪಿಆರ್ ಜನಗಣತಿ ದೇಶಾದ್ಯಂತ 2020ರ ಏಪ್ರಿಲ್ 1ರಿಂದ ಪ್ರಾರಂಭವಾಗಲಿದೆ.
ಈ ಯೋಜನೆಯೂ 8,500 ಕೋಟಿ ರೂಪಾಯಿ ವೆಚ್ಚದ್ದಾಗಿದೆ ಎಂದು ಸರ್ಕಾರ ತಿಳಿಸಿದೆ. ಭಾರತದ ಪ್ರತಿಯೊಬ್ಬ ನಾಗರಿಕನೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
ಈ ಮಧ್ಯೆ ಕೇರಳ, ಪಂಜಾಬ್ ಪಶ್ಚಿಮಬಂಗಾಳ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಎಎ, ಎನ್ ಸಿಆರ್ ರೀತಿಯೇ ಎನ್ ಪಿಆರ್ ಅನ್ನು ವಿರೋಧಿಸಿದ್ದು, ಎನ್ ಪಿಆರ್ ಸಂಗ್ರಹಕ್ಕೆಯಾವುದೇ ಕಾರಣಕ್ಕೂ ಪಶ್ಚಿಮಬಂಗಾಳ ಸಹಕಾರ ನೀಡುವುದಿಲ್ಲ ಎಂದು ಹೇಳಿದ್ದಾರೆ