ನವದೆಹಲಿ, ಡಿ 24 (Daijiworld News/PY) : ಏಷ್ಯಾದ ಅತ್ಯಂತ ಶ್ರೀಮಂತ ಹಾಗೂ ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಈ ವರ್ಷ 1.6 ಲಕ್ಷ ಕೋಟಿ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ. ಇದರಿಂದಾಗಿ ಒಟ್ಟು 4.3 ಲಕ್ಷ ಕೋಟಿ ರೂ.ಮಾಲೀಕರಾಗಿದ್ದಾರೆ ಎಂದು ತಿಳಿದುಬಂದಿದೆ.
ಮುಕೇಶ್ ಅಂಬಾನಿ ಅವರು ಹೊಂದಿರುವ ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಷೇರು ಈ ವರ್ಷ ಶೇ.38 ರಷ್ಟು ಹೆಚ್ಚಾಗಲಿದ್ದು, ಇದರಿಂದ ರಿಲಯನ್ಸ್ ಇಂಡಸ್ಟ್ರಿಯ ತೈಲ, ಗ್ಯಾಸ್ ಅಲ್ಲದೇ ಟೆಲಿಕಾಂ, ರಿಟೈಲ್ ಕ್ಷೇತ್ರವು ಒಳಗೊಂಡಿದ್ದು, ಆದಷ್ಟು ಬೇಗ ಇ-ಕಾಮರ್ಸ್ನತ್ತವೂ ಹೆಜ್ಜೆ ಇಡಲಿದೆ ಎಂದು ತಿಳಿದು ಬಂದಿದೆ.