ಹರ್ಯಾಣ ಡಿ 25(Daijiworld News/MB) : ಪೊಲೀಸ್ ಆಗಿದ್ದ ತನ್ನ ಪತಿಯನ್ನು 2 ವರ್ಷಗಳ ಹಿಂದೆ ತಾನು ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಗೆಯ ಪತ್ರವೊಂದನ್ನು ಜನತಾ ದರ್ಬಾರ್ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಅವರಿಗೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅನಿಲ್ ವಿಜ್ ಅವರು, "ಓರ್ವ ಮಹಿಳೆ ಬಂದು ಅಳಲಾರಭಿಸಿ, 2 ವರ್ಷಗಳ ಹಿಂದೆ ಪತಿಯನ್ನು ಕೊಂದಿರುವುದಾಗಿ ತಪ್ಪೊಪ್ಪಿ ನನಗೆ ಶಿಕ್ಷೆ ಕೊಡಿಸಿ ಎಂದು ಹೇಳಿದ್ದು ನಾನು ಆ ಮಹಿಳೆಯನ್ನು ಪೊಲೀಸರ ವಶಕ್ಕೆ ನೀಡಿದೆ, ಪೊಲೀಸರು ಠಾಣೆಗೆ ಕರೆದೊಯ್ದರು" ಎಂದು ಹೇಳಿದ್ದಾರೆ.
ತನ್ನ ಪತಿ ಅತಿಯಾಗಿ ಮದ್ಯಪಾನ ಮಾಡಿ ವಾಂತಿ ಮಾಡಲು ಆರಂಭಿಸಿದ್ದು ತಾನು ಬಟ್ಟೆಯ ತುಂಡುಗಳನ್ನು ಬಾಯಿಗೆ ತುರುಕಿದಾಗ ಅವರು ಮೃತಪಟ್ಟಿದ್ದಾರೆ ಎಂದು ಆಕೆ ನೀಡಿದ ಪತ್ರದಲ್ಲಿ ಬರೆಯಲಾಗಿದೆ.
ಈ ಘಟನೆಗೆ ಸಂಬಂಧಿಸಿ ದೂರು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.